ನದಿಯಲ್ಲಿ ಮುಳುಗಿ ಮೀನುಗಾರ ಸಾವು

16Anand9( kallapa baragali)
Published on

ನದಿಯಲ್ಲಿ ಮುಳುಗಿ ಮೀನುಗಾರ ಸಾವು

ಚಿಕ್ಕೋಡಿ:

ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಜಲಾನಯನ ಹಿನ್ನೀರಿನ ಮಾಸ್ತಿಹೊಳಿ, ಗುಡಗನಟ್ಟಿ ಪ್ರದೇಶದ ಬಳಿ ಮೀನು ಹಿಡಿಯಲು ಹೋಗಿದ್ದ ಸ್ಥಳಿಯ ಮೀನುಗಾರ ಹರಿಗೋಲು ನೀರಿನಲ್ಲಿ ಪಲ್ಟಿಯಾಗಿ ಮೀನುಗಾರ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಯಮಕನಮರಡಿ ಗ್ರಾಮದ ನಿವಾಸಿ ಕಲ್ಲಪ್ಪಾ ಮಾರುತಿ ಬರಗಾಲಿ(೪೫) ಮೃತ ಮೀನುಗಾರ ಎಂದು ಗುರುತಿಸಲಾಗಿದೆ.

ಮಂಗಳವಾರ ಸಾಯಂಕಾಲ ಮೀನು ಹಿಡಿಯಲು ನದಿಗೆ ಇಳಿದ ವೇಳೆ ಅವಗಢ ಸಂಭವಿಸಿದ್ದು,ವಿಷಯ ತಿಳಿದ ಹತ್ತರಗಿ ವಲಯ ಅಗ್ನಿಶಾಮಕ ತಂಡವು ಸ್ಥಳಕ್ಕೆ ದಾವಿಸಿ ಮೀನಗಾರನ ಶವ ಪತ್ತೆ ಹಚ್ಚಲು ಕಾರ್ಯಚರಣೆ ನಡೆಸಿದ ಬಳಿಕ ಬುಧವಾರ ಮಧ್ಯಾನ್ಹ ಮೀನುಗಾರನ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಲ್.ಕುಮಾರ, ಮೀನುಗಾರಿಕೆ ಉಪನಿರ್ದೇಶಕ ಸಂತೋಷ ಕೊಪ್ಪದ, ಚಿಕ್ಕೋಡಿ ಮೀನುಗಾರಿಕೆ ಸಹಾಯಕ ನಿರ್ದೇಶಕ ರಂಗನಾಥ ಶಿಂಧೆ ಇವರು ಭೇಟ್ಟಿ ನೀಡಿ ಪರಿಶೀಲಿಸಿದರು. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net