ನದಿಯಲ್ಲಿ ದೊರೆತ ಮೃತದೇಹದ ಗುರುತು ಪತ್ತೆ

mng--crime
Published on


ಚಾಮರಾಜನಗರ : ಕೊಳ್ಳೇಗಾಲ ತಾಲೂಕಿನ ಮಧ್ಯರಂಗನಾಥಸ್ವಾಮಿ ದೇವಾಲಯದ ಹಿಂಭಾಗದ ಕಾವೇರಿ ನದಿಯಲ್ಲಿ ಭಾನುವಾರ ದೊರೆತ ಮೃತದೇಹ ಗುರುತು ಪತ್ತೆಯಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ರವಣಿ ಗ್ರಾಮದ ಸುಬ್ಬಯ್ಯ(72) ಮೃತ ವೃದ್ಧ.


ಈತ ಮೇ 12ರಂದು ಸತ್ತೇಗಾಲ ಗ್ರಾಮದಲ್ಲಿದ್ದ ತಮ್ಮ ಮೊಮ್ಮಕ್ಕಳನ್ನು ನೋಡಲು ಆಗಮಿಸಿದ್ದರು. ಬಳಿಕ ಶಿವನಸಮುದ್ರ ಗ್ರಾಮದ ಶ್ರೀ ಮಧ್ಯರಂಗ ಸ್ವಾಮಿ ದೇವಾಲಯಕ್ಕೆ ತೆರಳಿದ್ದಾರೆ. ನಂತರ ಸಮೀಪದ ಕಾವೇರಿ ನದಿ ಬಳಿ ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿರಬಹುದು ಎನ್ನಲಾಗಿದೆ.


ಈ ಬಗ್ಗೆ ಸೋಮವಾರ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಗಮನಿಸಿದ ಸುಬ್ಬಯ್ಯ ಅವರ ಮಗ ಸತೀಶ್ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರಿಗೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net