ನದಿಗೆ ಹಾರಿದ್ದವನನ್ನು ರಕ್ಷಿಸಿದ ಮೀನುಗಾರರು

SRP_17-01
Published on

ಶ್ರೀರಂಗಪಟ್ಟಣ: ಜೀವನದಲ್ಲಿ ಜಿಗುಪ್ಸೆಗೊಂಡು ಸೇತುವೆ ಮೇಲಿನಿಂದ ಕಾವೇರಿ ನದಿಗೆ ಹಾರಿದ್ದ ವ್ಯಕ್ತಿಯನ್ನು ಪಟ್ಟಣದ ಕೆಲವು ಯುವಕರು ರಕ್ಷಿಸಿದ್ದಾರೆ.

ಪಟ್ಟಣದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ದಕ್ಷಿಣ ಕಾವೇರಿ ಸೇತುವೆ ಮೇಲೆ ಮಂಗಳವಾರ ಸಂಜೆ 7.30ರಲ್ಲಿ ಘಟನೆ ನಡೆದಿದೆ. 20 ಅಡಿ ಮೇಲಿನ ಸೇತುವೆಯಿಂದ ಜಿಗಿದು ನೀರಿನಲ್ಲಿ ಮುಳುಗಿದ್ದ ಮೈಸೂರಿನ ಟಿ.ಕೆ.ಲೇಔಟ್ ಬಡಾವಣೆಯ ರಾಜೇಗೌಡ (53) ಅವರನ್ನು ಪಟ್ಟಣದ ಕಾವೇರಿಪುರ(ಹಳೇ ಸಂತೇಮಾಳ) ಬಡಾವಣೆಯ ಮೀನುಗಾರಿಕೆ ಮಾಡುವ ನಾಲ್ವರು ಹಾಗೂ ಆಟೋ ಚಾಲಕ ತೆಪ್ಪದ ಮೂಲಕ ರಕ್ಷಿಸಿದ್ದಾರೆ.

ರಾಜೇಗೌಡ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈ ಕಾರಣಕ್ಕೆ ಸಂಸಾರದಲ್ಲಿ ಜಗಳ ಏರ್ಪಟ್ಟು ಮನನೊಂದಿದ್ದರು. ನದಿಯಿಂದ ಜಿಗಿಯುವುದನ್ನು ಕಂಡ ಆಟೋ ಚಾಲಕ ಸತೀಶ್ ಅವರು, ಮೀನುಗಾರರಿಗೆ ವಿಷಯ ತಿಳಿಸಿ ರಕ್ಷಿಸಿದ್ದಾರೆ. ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ರಾಜೇಗೌಡನನ್ನು ಸಂತೈಸಿ, ಕುಟುಂಬಸ್ಥರನ್ನು ಕರೆಸಿ ತೊಂದರೆ ನೀಡದಂತೆ ಸೂಚಿಸಿ ಕಳುಹಿಸಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net