ನದಿಗೆ ಬಿದ್ದವನ ರಕ್ಷಣೆ

sink death
Published on

ರಾಮದುರ್ಗ: ಪಟ್ಟಣದ ಹಳೆಯ ಸೇತುವೆ ಮೇಲಿಂದ ಗುರುವಾರ ಕಾಲು ಜಾರಿ ಮಲಪ್ರಭಾ ನದಿಗೆ ಬಿದ್ದಿದ್ದ ಪಟ್ಟಣದ ನಿವಾಸಿ ಬಸವರಾಜ ಡೊಣವಾಡ ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಬಸವರಾಜ ಕಾಲು ಜಾರಿ ನದಿಗೆ ಬೀಳುತ್ತಿದ್ದಂತೆ ಪ್ರತ್ಯಕ್ಷದರ್ಶಿ ಅಮತ ಬೀಳಗಿ ಮಾಹಿತಿ ನೀಡಿದ್ದಾರೆ. ತಕ್ಷಣ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ 2 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಠಾಣಾಧಿಕಾರಿ ಟಿ.ಡಿ.ವಡ್ಡರ, ಎಂ.ಬಿ.ರಡ್ಡೆರ, ಕರಿಯಪ್ಪ ಕುರಿ, ಎಂ.ಎಂ.ಪಿರಜಾದೆ, ರಾಘವೇಂದ್ರ ಮಿರ್ಜಿ, ಶಂಕರ ಲಮಾಣಿ, ವಿನೋದ ಮುರಗೋಡ, ಹಣಮಂತ ಪೂಜೇರ ಕಾರ್ಯಾಚರಣೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net