ನದಿಗೆ ಬಿದ್ದ ಪಿಕ್‌ಅಪ್ ವಾಹನ, ಚಾಲಕ ಸಾವು?

kls accident
ವಾಹನ ಬಿದ್ದ ಸ್ಥಳದಲ್ಲಿ ಜನ ಕುತೂಹಲದಿಂದ ನೋಡುತ್ತಿರುವುದು.
Published on

ಕಳಸ: ಕಳಸ-ಕಳಕೋಡು ರಸ್ತೆಯ ಕೊಳಮಗೆ ಬಳಿ ಭದ್ರಾ ನದಿಗೆ ಗುರುವಾರ ಮಧ್ಯಾಹ್ನ ಪಿಕ್‌ಅಪ್ ವಾಹನ ಬಿದ್ದಿದ್ದು ಯುವಕನೊಬ್ಬ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.

ಗಣಪತಿಕಟ್ಟೆಯ ಶಮಂತ (22) ಗುರುವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಕಳಕೋಡಿನ ಕಡೆಗೆ ಪಿಕ್‌ಅಪ್ ವಾಹನದಲ್ಲಿ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಕಳಕೋಡಿನಿಂದ ತೋಟದ ಕಾರ್ಮಿಕರನ್ನು ಕಳಸಕ್ಕೆ ಕರೆತರಲು ಹೋಗಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

ಅತಿವೇಗದಲ್ಲಿ ಹೋದ ಪಿಕ್‌ಅಪ್ ವಾಹನ ರಸ್ತೆ ಪಕ್ಕದಲ್ಲಿ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಂಬ ಮೂರು ತುಂಡುಗಳಾಗಿ ಬಿದ್ದಿದ್ದು ವಾಹನ ಭದ್ರಾ ನದಿಗೆ ಉರುಳಿರುವ ಶಂಕೆ ಇದೆ. ನದಿಯಲ್ಲಿ 20 ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು ವಾಹನ ಕಾಣುತ್ತಿಲ್ಲ. ವಾಹನ ಚಲಾಯಿಸುತ್ತಿದ್ದ ಶಮಂತ ವಾಹನದಲ್ಲೇ ಸಿಲುಕಿರಬೇಕು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ನೂರಾರು ಜನರು ಧಾವಿಸಿದ್ದು ಕಳಸ ಪೊಲೀಸರು ಅಗತ್ಯ ಕ್ರಮ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net