ನದಿಗೆ ಉರುಳಿದ ಕಾರು ಚಾಲಕ ಸಾವು

klb2
ಚಿತ್ತಾಪುರ ತಾಲೂಕಿನ ದಂಡೋತಿ ಬಳಿಯ ಕಾಗಿಣಾ ನದಿಯಲ್ಲಿ ಬಿದ್ದಿರುವ ಕಾರು.
Published on

ಚಿತ್ತಾಪುರ: ದಂಡೋತಿ ಬಳಿಯ ಕಾಗಿಣಾ ನದಿಯಲ್ಲಿ ಭಾನುವಾರ ಮಧ್ಯರಾತ್ರಿ ಕಾರೊಂದು ನದಿಗೆ ಉರುಳಿ ಚಾಲಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಚಿತ್ತಾಪುರದ ಬಾಹರಪೇಠ ನಿವಾಸಿ ಚಾಲಕ ನಿಂಗಪ್ಪ ಕೋಲಕುಂದಿ (50) ಮೃತಪಟ್ಟವ. ಕಾರಿನಲ್ಲಿದ್ದ ಕೃಷ್ಣ, ಉಮೇಶ್‌ಗೆ ಗಾಯಗಳಾಗಿವೆ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ನಿಂಗಪ್ಪ, ಕೃಷ್ಣ, ಉಮೇಶ ಹಾಗೂ ಸಿದ್ದರಾಮ ಸೇಡಂಗೆ ಹೋಗಿದ್ದರು. ಅಲ್ಲಿ ಕಾರು ನೋಡಿ ವಾಪಸ್ ಚಿತ್ತಾಪುರಕ್ಕೆ ಬರುವಾಗ ಸ್ನೇಹಿತ ಸಿದ್ದರಾಮನನ್ನು ದಂಡೋತಿಯಲ್ಲಿ ಇಳಿಸಿದ್ದಾರೆ. ಬಳಿಕ ಕಾಗಿಣಾ ಬ್ರಿಡ್ಜ್ ಮೇಲೆ ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ.

ಚಾಲಕ ನಿಂಗಪ್ಪಗೆ ಕಾರಿನಿಂದ ಹೊರಬರಲು ಆಗದೆ ಕೊನೆಯುಸಿರೆಳೆದಿದ್ದಾನೆ. ಕೃಷ್ಣ ಹಾಗೂ ಉಮೇಶ ಕಾರಿನಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಮೇಶಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಿz್ದÁನೆ.

ಡಿವೈಎಸ್‌ಪಿ ಶಂಕರಗೌಡ ಪಾಟೀಲï, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‌ಐ ಚೇತನ್ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net