ನದಿ ತೀರಕ್ಕೆ ತೆರಳದಿರಲು ಸೂಚನೆ

02
Published on

ಕೊಡೇಕಲ್ : ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಡುತ್ತಿರುವ ಕಾರಣ ಗ್ರಾಮಸ್ಥರು ನದಿ ತೀರಕ್ಕೆ ತೆರಳದಂತೆ ಜಿಲ್ಲಾ ನೋಡಲ್ ಅಧಿಕಾರಿ ವಿನೋದಕುಮಾರ ಎಸ್.ಬಿ. ಸೂಚಿಸಿದ್ದಾರೆ.

ಗುರುವಾರ ಮೇಲಿನಗಡ್ಡಿ, ಜಂಗಿನಗಡ್ಡಿ, ಜುಮಾಲಪುರ, ಜುಮಾಲಪುರ ದೊಡ್ಡ ತಾಂಡಾ ಇತರ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಸ್ಥಿತಿಗತಿತಿ ಪರಿಶೀಲಿಸಿದ ನಂತರ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಜಾಗೃತಿ ಮೂಡಿಸಿದರು.

ಈಗಾಗಲೇ ಜಲಾಶಯದಿಂದ ೧,೬೬,೯೦೦ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದ್ದು, ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಯಾವ ಕಾರಣಕ್ಕೂ ನದಿಯತ್ತ ತೆರಳಬಾರದು. ಹೋದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕಂದಾಯ ನಿರೀಕ್ಷಕ ಶಾಂತಗೌಡ, ಪಿಡಿಒ ಮೋಹನ ಹುಲ್ಲೂರ, ಗ್ರಾಮ ಲೆಕ್ಕಾಧಿಕಾರಿ ದೇವು ಚವ್ಹಾಣ್, ಅಮರೇಶ, ಅಪ್ಪಣ್ಣ ಗುಡಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net