ನಂದಿಹಳ್ಳಿ ಗ್ರಾಪಂನಲ್ಲಿ 25 ಲಕ್ಷ ರೂ. ದುರ್ಬಳಕೆ?; ತಾಪಂ ಇಒ ಪರಿಶೀಲನೆ

Hadagali Nandihalli Gp
ನಂದಿಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಹೊರನೋಟ.
Published on

ಹೂವಿನಹಡಗಲಿ: ತಾಲೂಕಿನ ನಂದಿಹಳ್ಳಿ ಗ್ರಾಪಂನಲ್ಲಿ 25 ಲಕ್ಷ ರೂ. ಅನುದಾನ ದುರ್ಬಳಕೆ ಆಗಿದೆ ಎಂಬ ಆರೋಪ ಮೇರೆಗೆ ಶುಕ್ರವಾರ ತಾಪಂ ಇಒ ಡಾ.ಜಯರಾಮ್ ಎಂ.ಚವ್ಹಾಣ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಳೆದ ಜೂನ್ ಮತ್ತು ಜುಲೈನಲ್ಲಿ 15ನೇ ಹಣಕಾಸು ಮತ್ತು ಗ್ರಾಮವಿಕಾಸ ಯೋಜನೆ ಅನುದಾನವನ್ನು ಯಾವುದೇ ಕಾಮಗಾರಿ ನಡೆಸದೆ, ಚೆಕ್ ಮೂಲಕ ದೈವಿಕ ಎಂಟರ್ ಪ್ರೈಸಸ್ ಆ್ಯಂಡ್ ಕಂಪನಿ ಹೆಸರಿಗೆ ಹಿಂದಿನ ಅಧ್ಯಕ್ಷೆ ಮೈಲವ್ವ ಬಾಲೇಶ ಹಾಗೂ ಪಿಡಿಒ ಜ್ಯೋತಿ ದೊಡ್ಡಮನಿ ಹಂತ, ಹಂತವಾಗಿ ಹಣ ವರ್ಗಾವಣೆ ಮಾಡಿದ್ದಾರೆ.

ಜೂ.13ರಂದು 6 ಚೆಕ್‌ಗಳ ಮೂಲಕ 18 ಲಕ್ಷ ರೂ., 28ರಂದು 2.40 ಲಕ್ಷ ರೂ., ಜು.26ರಂದು 2 ಲಕ್ಷ ರೂ. ಮತ್ತು ಗ್ರಾಮವಿಕಾಸ ಅನುದಾನದಲ್ಲಿ 3.50 ಲಕ್ಷ ರೂ. ಮೊತ್ತದ ಚೆಕ್ ನೀಡಲಾಗಿದೆ ಎಂದು ಗ್ರಾಪಂ ಸದಸ್ಯರು, ಸ್ಥಳೀಯರು ಮೌಖಿಕ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ತಾಪಂ ಇಒ ಭೇಟಿ ನೀಡಿ ಪರಿಶೀಲಿಸಿದ್ದು, ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಕಂಡುಬಂದಿದೆ.

ನಂದಿಹಳ್ಳಿ ಗ್ರಾಪಂನಲ್ಲಿ ಹಣ ದುರ್ಬಳಕೆ ದೂರು ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿ, ಕಡತಗಳನ್ನು ಪರಿಶೀಲಿಸಿದ್ದೇನೆ. ಮೇಲ್ನೋಟಕ್ಕೆ ಹಣ ದುರುಪಯೋಗ ಮಾಡಿಕೊಂಡಿರುವುದು ಕಂಡು ಬಂದಿದ್ದು, ತನಿಖೆ ನಡೆಸಲು ತಂಡವನ್ನು ರಚಿಸಲಾಗಿದೆ. ಗ್ರಾಪಂ ವ್ಯಾಪ್ತಿಯ ಬ್ಯಾಂಕ್‌ನಲ್ಲಿ ನನ್ನ ಆದೇಶ ಇಲ್ಲದೆ ಯಾವುದೇ ವ್ಯವಹಾರ ನಡೆಸದಂತೆ ಸೂಚನೆ ನೀಡಿದ್ದೇನೆ.ಡಾ.ಜಯರಾಮ್ ಎಂ.ಚವ್ಹಾಣ್ತಾಪಂ ಇಒ, ಹೂವಿನಹಡಗಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net