

ಹುನಗುಂದ: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಭೂಸುಧಾರಣೆ ಕಾಯ್ದೆ ಜಾರಿಗೆ ತಂದು ರೈತರನ್ನೇ ಭೂಒಡೆಯನಾಗಿ ಮಾಡಿದರು ಎಂದು ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತ, ತಾಪಂ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ನೇತಾರ ಡಿ. ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಿ. ದೇವರಾಜ ಅರಸು ತಮ್ಮ ಆಡಳಿತ ಅವಧಿಯ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಂಡು ಬಡವರು, ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಿ ಅವರ ಬಾಳಿಗೆ ಬೆಳಕಾಗಿದ್ದರು ಎಂದರು.
ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಸಿಡಿಪಿಒ ಅನ್ನಪೂರ್ಣ ಕುಪಕಡ್ಡಿ, ಡಿವೈಎಸ್ಪಿ ಪ್ರಭು ಕಿಲ್ಲೇದಾರ, ಸಿಪಿಐ ಸುರೇಶ ಬೆಂಡಗುಂಬಳ, ಪಿಎಸ್‌ಐ ಚನ್ನಯ್ಯ ದೇವೂರ, ಸಮಾಜ ಕಲ್ಯಾಣಾಧಿಕಾರಿ ಎಂ.ಎಂ. ಕಟ್ಟಿಮನಿ, ಲೋಕೋಪಯೋಗಿ ಅಧಿಕಾರಿ ವೆಂಕಟೇಶ ಹೂಲಗೇರಿ, ಆರೋಗ್ಯ ಅಧಿಕಾರಿ ಎಸ್.ಎಚ್. ಅಂಗಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಜಿ. ಎನ್. ಖ್ಯಾಡಿ, ವಿಸ್ತರಣಾಧಿಕಾರಿ ಸಂಗಮೇಶ ಗಡೇದ, ಶಿರಸ್ತೇದಾರ್ ಈಶ್ವರ ಗಡ್ಡಿ ಇತರರಿದ್ದರು.