

ಚಿತ್ರದುರ್ಗ: ವಯೋವೃದ್ಧ ಪಾಲಕರನ್ನು ಕೀಳಾಗಿ ನೋಡುವುದು ಸರಿಯಲ್ಲವೆಂದು ಮಾಜಿ ಶಾಸಕ,ರೆಡ್ಡಿ ಜನಸಂಘದ ಅಧ್ಯಕ್ಷ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ರೆಡ್ಡಿ ಜನಸಂಘದಿಂದ ನಗರದ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪ್ರತಿಭಾಪುರಸ್ಕಾರ, ಮಾಜಿ ಸೈ ನಿಕರು,ನಿವೃತ್ತ ಸರ್ಕಾರಿ ನೌಕರರು ಹಾಗೂ ರಾಷ್ಟ್ರ ಪ್ರಶಸ್ತಿಗೆ ಭಾಜನರಾದವರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಸಿ,ದೊಡ್ಡವರನ್ನಾಗಿ ಮಾಡಿದ ತಂದೆ-ತಾಯಂದಿರನ್ನು ಕಡೆಗಣಿಸುವ ಪ್ರವೃತ್ತಿ,ವೃದ್ಧಾಶ್ರಮಗಳು ಹೆಚ್ಚುತ್ತಿರುವುದು ಮನಸ್ಸಿಗೆ ನೋ ವು ತರಿಸುತ್ತದೆ. ವೃದ್ಧಾಶ್ರಮಗಳ ಹೆಚ್ಚಳ ನಮ್ಮ ದೇಶದ ಸಂಸ್ಕೃತಿಗೆ ವಿರುದ್ಧವಾದ್ದದಾಗಿದೆ. ಬೆಳೆಸಿದ,ಕಲಿಸಿದ ಪಾಲಕರನ್ನು,ನಡೆದು ಬಂದ ದಾರಿ ಹಾಗೂ ಸಾಮಾಜಿಕ ಬದ್ಧತೆಯನ್ನು ಎಂದಿಗೂ ಮರೆಯಬಾರದು. ಹಿರಿಯರನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವುದು ಮಕ್ಕಳ ಕರ್ತ್ಯವ್ಯವೆಂದರು.
ನಾವಿಂದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ದೇಶ ಕಾಯುವ ಸೈನಿಕರ ಕೊಡುಗೆ ಆಪಾರ. ಪ್ರತಿ ಪ್ರತಿಭಾ ಪು ರಸ್ಕಾರ ಸಮಾರಂಭದಲ್ಲಿ ಮಾಜಿ ಸೈನಿಕರನ್ನು,ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಲಾಗುವುದು. ರೆಡ್ಡಿ ಜನಸಂಘ ರಾಜ್ಯದಲ್ಲೇ ಆರ್ಥಿಕ ವಾಗಿ ಸದೃಢವಾಗಿರುವ ಸಂಘಟನೆಯಾಗಿದೆ. ಇದಕ್ಕೆ ಸಮುದಾಯದ ಹಿರಿಯರ ಕೊಡುಗೆ ಆಪಾರ. ಈ ವರ್ಷದ ಪ್ರತಿಭಾ ಪುರಸ್ಕಾರಕ್ಕೆ 60 ಲಕ್ಷ ರೂ.ಅಧಿಕ ವೆಚ್ಚವಾಗಿದೆ. ಸಾಧನೆಯತ್ತ ಸಾಗುವುದಕ್ಕೆ ನೀಡುವುದಕ್ಕೆ ಪ್ರತಿಭಾಪುರಸ್ಕಾರ ಪ್ರೋತ್ಸಾಹವಾಗಿದೆ ಎಂದರು.
ಸಂಘದ ಕಾರ‌್ಯದರ್ಶಿ ಡಿ.ಕೆ.ಶೀಲಾ ಅವರು ಮಾತನಾಡಿ,ಸಮುದಾಯದ ಹಿರಿಯರ ನಿಸ್ವಾರ್ಥ ಸೇವೆ,ಬದ್ಧತೆ ಮತ್ತು ಶ್ರಮದ ಫಲ ವಾಗಿ 1916ರಲ್ಲಿ ಆರಂಭವಾದ ಸಂಘವಿಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸಂಘವನ್ನು ಇನ್ನಷ್ಟು ಸದೃಢಗೊಳಿಸಲು ನಮ್ಮಲ್ಲಿರುವ ಅಂ ಹಕಾರ,ಸ್ವಾರ್ಥ ಮನೋಭಾವಗಳನ್ನು ತೊರೆಯಬೇಕಿದೆ ಎಂದರು. ಸಂಘದ ನಿರ್ದೇಶಕ ದಾವಣಗೆರೆ ಮೆ.ಕಾ.ಮುರುಳಿಕೃಷ್ಣ ಅವರು ಮಾತನಾಡಿ,ತಿಪ್ಪಾರೆಡ್ಡಿ ಅವರಂಥ ಹಿರಿಯ ನೇತೃತ್ವದಲ್ಲಿ ಸಂಘ ಬಲಿಷ್ಠವಾಗಿದೆ ಎಂದರು.
ಸಂಘದ ಕಾರ‌್ಯದರ್ಶಿ ಕೆ.ಪರಶುರಾಮ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಕೆ.ಅನಂತರೆಡ್ಡಿ,ಖಜಾಂಚಿ ಜಿ.ವೈ.ಸುರೇಶ್‌ಕುಮಾರ್ ಹಾಗೂ ದಾವಣಗೆರೆ,ಶಿವಮೊಗ್ಗ ಹಾಗೂ ಚಿತ್ರದುರ್ಗ ವ್ಯಾಪ್ತಿಯನ್ನು ಒಳಗೊಂಡಿರುವ ಸಂಘದ ಕಾರ‌್ಯಕಾರಿ ಸಮಿತಿ ಸದಸ್ಯರು,ಸಂಘದ ತಾಲೂಕು ಘಟಕಗಳ ಅಧ್ಯಕ್ಷರು ಇದ್ದರು.
ನೈಟಿಂಗೇಲ್‌ಪ್ರಶಸ್ತಿಗೆ ಭಾಜನರಾದ ಹೊನ್ನಾಳಿ ತಾಲೂಕು ಬಾಗತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ನಾಗರತ್ನ, 45 ಮಾ ಜಿ ಸೈನಿಕರು,42ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು. 110 ಎಸ್ಸೆಸ್ಸೆಲ್ಸಿ ಹಾಗೂ 170 ಸೆಕೆಂಡ್ ಪಿಯುಸಿಯಲ್ಲಿ ಹೆಚ್ಚಿನ ಅಂಕಗ ಳೊಂದಿಗೆ ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ರಾಜ್ಯಸಭಾ ಸದಸ್ಯರಾಗಲಿ
ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವಂತೆ ಬಿಜೆಪಿಯನ್ನು ಸಮುದಾಯದವರೆಲ್ಲರೂ ಪಕ್ಷಾತೀತವಾಗಿ ಒತ್ತಾಯಿಸಬೇಕಿದೆ.
ಮೆ.ಕಾ.ಮುರುಳಿಕೃಷ್ಣ,ನಿರ್ದೇಶಕ ರೆಡ್ಡಿ ಜನಸಂಘ