

ಮೂಡಲಗಿ: ತಾಲೂಕಿನ ನದಿ ಪಕ್ಕದ ಗ್ರಾಮಗಳ ಜನ, ಜಾನುವಾರುಗಳ ಸ್ಥಳಾಂತರ ಕಾರ್ಯ ಶುಕ್ರವಾರದಿಂದ ಆರಂಭಿಸಲಾಗಿದ್ದು, ಟಪ್ರಭಾ ನದಿ ನೀರು ಗ್ರಾಮದೊಳಕ್ಕೆ ನುಗ್ಗಲಾರಂಭಿಸಿದೆ. ತಾಲೂಕಿನ ಹುಣಶ್ಯಾಳ ಪಿಜಿ ಹಳೆಯ ಗ್ರಾಮ ನಡುಗಡ್ಡೆಯಾಗಿದೆ. ಅಲ್ಲಿನ 113 ಮನೆಗಳ 511 ಜನರು ಹಾಗೂ 230 ಜಾನುವಾರುಗಳನ್ನು ಗ್ರಾಮದ ಹೊರವಲಯದಲ್ಲಿ ತೆರೆಯಲಾದ 5 ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಪಟಗುಂದಿಯ 14 ಮನೆಗಳ 65 ಜನರು, ವಡೇರಹಟ್ಟಿಯ 27 ಮನೆಗಳ 120 ಜನ, ಮುಸಗುಪ್ಪಿ 64 ಮನೆಗಳ 254 ಜನ, ಹುಣಶ್ಯಾಳ ಪಿವೆನ 10 ಮನೆಗಳ 39 ಜನ, ಮುನ್ಯಾಳದ 12 ಮನೆಗಳ 60 ಜನರನ್ನು ಕಾಳಜಿ ಕೇಂದ್ರಗಳಿಗೆ ಜಾನುವಾರಗಳ ಸಮೇತ ಸ್ಥಳಾಂತರಿಸಲಾಗಿದೆ ಎಂದು ತಹಸೀಲ್ದಾರ್ ಮಹಾದೇವ
ಸನ್ನಮುರಿ ತಿಳಿಸಿದ್ದಾರೆ. ಇನ್ನು ಅರಳಿಮಟ್ಟಿ, ಕಮಲದಿನ್ನಿ, ರಂಗಾಪುರ, ಅವರಾದಿ, ಬಿಸನಕೊಪ್ಪ, ಪುಲಗಡ್ಡಿ, ಸುಣಧೋಳ, ಬೆರನಟ್ಟಿ, ತಿಗಡಿ, ಧರ್ಮಟ್ಟಿ, ಗುಜನಟ್ಟಿ, ಢವಳೇಶ್ವರ ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.