ನಡಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲೇ ಪಡಿತರ ವಿತರಿಸಿ

7 skpp 1--
Published on
  • ಹಾಸನ : ಸಕಲೇಶಪುರ ತಾಲೂಕಿನ ನಡಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲೇ ಪಡಿತರ ವಿತರಿಸುವಂತೆ ಕುಂಭರಡಿ ಗ್ರಾಮಸ್ಥರು ಆಹಾರ ಇಲಾಖೆ ಶಿರಸ್ತೇದಾರ್ ಶರವಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

  • ಕುಂಭರಡಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಪಡಿತರ ವಿತರಣೆ ಮಾಡದಿರುವ ಕಾರಣ ಆಹಾರ ಇಲಾಖೆ ಹಿರಿಯ ಅಕಾರಿಗಳು ಅಂಗಡಿ ಅಮಾನತುಗೊಳಿಸಿ, ನಡಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಿದ್ದರು.
    ಆದರೆ, ಕುಂಭರಡಿ ಗ್ರಾಮದ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದ ವ್ಯಕ್ತಿ ಅಂಗಡಿ ಅಮಾನತು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಅಕಾರಿಗಳ ಕ್ರಮವನ್ನು ಅಮಾನ್ಯಗೊಳಿಸಿ, ಅಕ್ಟೋಬರ್ ತಿಂಗಳಿನಿಂದ ಪಡಿತರವನ್ನು ಕುಂಭರಡಿ ನ್ಯಾಯಬೆಲೆ ಅಂಗಡಿಯಲ್ಲೇ ನೀಡಲು ನ್ಯಾಯಾಲಯ ಆದೇಶ ನೀಡಿದೆ.

ತಮಗೆ ಕುಂಭರಡಿ ನ್ಯಾಯಬೆಲೆ ಅಂಗಡಿ ಬದಲಾಗಿ ನಡಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲೇ ಪಡಿತರ ವಿತರಣೆಗೆ ಅವಕಾಶ ಕಲ್ಪಿಸಬೇಕು ಎಂದು ಶಿರಸ್ತೆದಾರ್ ಅವರಿಗೆ ಮನವಿ ನೀಡಲಾಗಿದೆ. ಈ ವೇಳೆ ಗ್ರಾ.ಪಂ ಸದಸ್ಯ ರಘುನಂದನ್, ಮುಖಂಡರಾದ ಲಕ್ಷ್ಮಣ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net