ನಟನೆ ಜತೆ ರಾಜಕೀಯದಲ್ಲಿ ಬೆಳೆದವರು

29 yerriswamy 04
Published on

ಬಳ್ಳಾರಿ : ನಟನೆ ಜತೆಗೆ ರಾಜಕೀಯರಂಗದಲ್ಲಿ ತಮ್ಮದೇ ಛಾಪು ಮೂಡಿಸದ ವಿಶ್ವದ ಏಕೈಕ ನಾಯಕ ದಿ. ಎನ್.ಟಿ ರಾಮರಾವ್ ಎಂದು ಪಾಲಿಕೆ ಮಾಜಿ ಮೇಯರ್ ಎಂ. ರಾಜೇಶ್ವರಿ ಸುಬ್ಬರಾಯಡು ಹೇಳಿದರು.
ಇಲ್ಲಿನ ಹವಂಬಾವಿಯ ವಿಜಯ ದುರ್ಗ ಕೌಂಪಡ್‌ನಲ್ಲಿ ಭೀಮನೇನಿ ಸಹೋದರರು ಹಾಗೂ ರಘುರಾಮ್ ಕಲಾಮಿತ್ರ ಬೃಂದದಿಂದ ದಿ. ಎನ್‌ಟಿ ರಾಮರಾವ್ ಅವರ 101 ನೇ ಜಯಂತಿ ಅಂಗವಾಗಿ ಮಂಗಳವಾರ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿ. ಎನ್‌ಟಿ ರಾಮರಾವ್ ಚಲನ ಚಿತ್ರರಂಗದ ತೆಲುಗು ಭಾಷಿಗರ ಆರಾದ್ಯ ದೈವವಾಗಿ ಇಂದಿಗೂ ಗುರುತಿಸಿಕೊಂಡಿದ್ದಾರೆ. ಚಿತ್ರರಂಗ ರೀತಿಯಲ್ಲಿ ರಾಜಕೀಯ ರಂಗದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಪ್ರಸಿದ್ದಿ ಪಡೆದರು. ನಮ್ಮ ಕುಟುಂಬಕ್ಕೂ ಅವರಿಗೂ ರಾಜಕೀಯ ಅವಿನಾಭಾವ ಸಂಬಂಧ ಹೊಂದಿದ್ದರು ಎಂದರು.
ಕಾರ್ಯಕ್ರಮದಲ್ಲಿ ದಿ.ಎನ್.ಟಿ ರಾಮರಾವ್ ಅವರ ಅಭಿನಯಿಸಿದ ಸಾಮಾಜಿಕ ಹಾಗೂ ಪೌರಾಣಿಕ ಚಲನಚಿತ್ರದ ಗೀತೆ, ಪದ್ಯ ಹಾಗೂ ಅಣುಕು ಸಂಭಾಷಣೆಗಳನ್ನು ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net