’ನಟ ಸುದೀಪ್ ಹುಟ್ಟುಹಬ್ಬ’ ವಿವಿಧ ಸೇವಾ ಕಾರ್ಯ

1725265515342
Published on

ತಿ.ನರಸೀಪುರ : ನಟ ಸುದೀಪ್ ಅವರ 51ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ಕೆಂಡನಕೊಪ್ಪಲು ಗ್ರಾಮದ ಕಿಚ್ಚ ಸುದೀಪ್ ಸಹಾಯ ಸೇನೆಯ ಸದಸ್ಯರು ಸೋಮವಾರ ವಿವಿಧ ಸೇವಾ ಕಾರ್ಯ ನೆರವೇರಿಸಿದರು.


ಗ್ರಾಮದ ಶ್ರೀ ಮಂಟೇಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ ಮಾಡಲಾಯಿತು. ನೇತ್ರ ತಜ್ಞೆ ಭಾರತಿ ಹಾಗೂ ಆಸ್ಪತ್ರೆಯ ಆಡಳಿತ ವೈದ್ಯಾಕಾರಿ ಡಾ.ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಗೆ ಬ್ಯಾಗ್, ಸಮವಸ ವಿತರಿಸಲಾಯಿತು. ಗ್ರಾಮದ ಶಾಲೆಯ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಗ್ರಾಮಸ್ಥರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಅನಾಥ ಶವಗಳ ಮುಕ್ತಿದಾತ ಡಾ.ಎಂ.ಮಾದೇಶ್ ಅಭಿಮಾನಗಳ ಸೇವಾಕಾರ್ಯದ ಬಗ್ಗೆ ಮೆಚ್ಚುಗೆ ಮಾತನಾಡಿದರು.


ಪೋಲೀಸ್ ವೃತ್ತ ನಿರೀಕ್ಷಕ ಧನಂಜಯ್, ಕಿಚ್ಚ ಸುದೀಪ್ ಸಹಾಯ ಸೇನೆಯ ಮುಖ್ಯಸ್ಥರಾದ ಲೋಕೇಶ್, ಪ್ರಸನ್ನಕುಮಾರ್, ಶಶಿಕುಮಾರ್, ನಂಜುಂಡಸ್ವಾಮಿ, ಚಂದ್ರಶೇಖರ್, ವಿನೋದ್, ಪುನೀತ್, ಆನಂದ್, ಗಂಗಾಧರ್, ರವಿ, ಯಶವಂತ್, ಹರೀಶ್ ಗೋಪಾಲ್, ವಿ.ರಾಮ, ರಂಗಸ್ವಾಮಿ, ಗೋಪಾಲ, ಎನ್.ಶಶಿಕುಮಾರ್, ಕೆ.ಗವಿಸಿದ್ದ, ಮರಡೀಪುರ ನಾಗರಾಜು ಇತರರು ಇದ್ದರು.

ನಟ ಸುದೀಪ್ ಅವರ 51ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾರತಿ ಹಾಗೂ ಡಾ.ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ಡಾ.ಎಂ.ಮಾದೇಶ್, ಲೋಕೇಶ್, ಪ್ರಸನ್ನಕುಮಾರ್, ಶಶಿಕುಮಾರ್, ನಂಜುಂಡಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net