ನಟ ಶಿವಣ್ಣ ಗುಣಮುಖರಾಗಲಿ ಎಂದು ಪೂಜೆ

IMG-20241226-WA0018
Published on

ಚಾಮರಾಜನಗರ: ನಟ ಶಿವರಾಜ್ ಕುಮಾರ್ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಬೇಗ ಗುಣಮುಖರಾಗಲಿ ಎಂದು ನಗರದ ದೊಡ್ಡರಸನ ಕೊಳದ ಗಣಪತಿಗೆ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆಯಿಂದ ಇಡುಗಾಯಿ ಒಡೆಯುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.

ಇದೇ ವೇಳೆ ಸಿಂಹ ಥಿಯೇಟರ್ ನ ಮಾಲಿಕರಾದ ಜಯಸಿಂಹ ಅವರು ಮಾತನಾಡಿ, ಮೂತ್ರಕೋಶ ಕ್ಯಾನ್ಸರ್ ನಿಂದ ಬಳಲುತ್ತಿರುವ ನಟ ಶಿವರಾಜ್ ಕುಮಾರ್ ಅವರಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅಮೆರಿಕದ ಡಾಕ್ಟರ್ ಮುರುಗೇಶ ಮನೋಹರನ್ ಅವರು ತಿಳಿಸಿದ್ದಾರೆ. ಆದ್ದರಿಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಎಲ್ಲಾ ಅಭಿಮಾನಿಗಳಿಗೆ ಆಪ್ತರಾಗಿದ್ದಾರೆ ಅಲ್ಲದೆ ನಮ್ಮ ಊರಿನ, ಜಿಲ್ಲೆಯ ಕರುನಾಡಿನ ಕುಮಾರ ಆದಷ್ಟು ಬೇಗ ನಮ್ಮೆಲ್ಲರ ಆಶೀರ್ವಾದದಿಂದ ಅವರು ಅವರು ಗುಣಮುಖರಾಗಿ ಮತ್ತೆ ತಮ್ಮ ನಟನೆ ಸಿನಿಮಾ ಕ್ಷೇತ್ರದಲ್ಲಿ ಮುಂದುವರಿಸಲಿದ್ದಾರೆ ಎಂದು ದೇವರಲ್ಲಿ ನಾವು ಪ್ರಾರ್ಥಿಸಿಕೊಳ್ಳುತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಎಚ್.ಎಂ.ಶಿವಣ್ಣ ಮಂಗಲ, ಹೊಸೂರು, ಪ್ರಧಾನ ಕಾರ್ಯದರ್ಶಿ ಚಂದಕವಾಡಿ ಡಿ.ರಾಜಣ್ಣ, ಈಶ್ವರಿ ಟ್ರಸ್ಟ್ ನ ವೆಂಕಟೇಶ್, ವೆಂಕಟೇಶ್ವರ ಹೋಟೆಲ್ ಮಾಲೀಕ ವಿ.ಶ್ರೀನಿವಾಸ್, ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಕೃಷ್ಣನಾಯಕ, ಕಲಾಪೋಷಕ ಎಲ್.ಸುರೇಶ್ ಜನಪದ ಕಲಾವಿದ ರವಿಚಂದ್ರ ಪ್ರಸಾದ್ ಕಹಳೆ, ಕಲಾವಿದರಾದ ಗೌರಿಶಂಕರ್, ಕೆ.ಸಿ.ರಂಗಸ್ವಾಮಿ ಕಾಗಲವಾಡಿ, ಸದಸ್ಯರಾದ ವಸಂತ ಬಂಗಾರು, ಕಲಾಪೋಷಕ ಮಣಿ ಸೇರಿದಂತೆ ಶಿವರಾಜ್ ಕುಮಾರ್ ಅಭಿಮಾನಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net