ನಗರೋತ್ಥಾನ ಯೋಜನೆಯಡಿ ೭೫ ಲಕ್ಷ ರೂ.

ydg08
Published on

ಶಹಾಪುರ: ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನ ಕಟ್ಟಡ ಕಾಮಗಾರಿಯ ಇನ್ನುಳಿದ ಕಾರ್ಯಕ್ಕಾಗಿ ಇನ್ನೂ ೭೫ ಲಕ್ಷ ರೂ. ನಗರೋತ್ಥಾನ ಯೋಜನೆಯಡಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಗುರುವಾರ ಭವನದ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕಟ್ಟಡ ಕಾಮಗಾರಿ ಆರಂಭಿಸಲು ೧ ಕೋಟಿ ಅನುದಾನ ನೀಡಲಾಗಿತ್ತು. ಅದರಂತೆ ಮೊದಲ ಮಹಡಿ ಕೆಲಸ ಪೂರ್ಣಗೊಂಡಿದೆ. ಆದರೆ ಇನ್ನಿತರ ಕಾಮಗಾರಿಯಾದ ಬಾಗಿಲು, ಕಿಟಿಕಿ ನೆಲ ಹಾಸು ಸೇರಿ ಇತರೆ ಕೆಲಸಕ್ಕೆ ಅನುದಾನದ ಕೊರತೆ ಎದುರಾದಾಗ ೫೦ ಲಕ್ಷ ರೂ. ಬಿಡುಗಡೆ ಮಾಡಲಗಿದೆ. ಅಲ್ಲದೆ ಈಗ ಕಟ್ಟಡದ ಸುತ್ತಲು ಕಂಪೌAಡ ಹಾಗೂ ಇನ್ನಿತರ ಅಗತ್ಯ ಕಾಮಗಾರಿಗಾಗಿ ಹೆಚ್ಚವರಿಯಾಗಿ ೭೫ಲಕ್ಷ ರೂ. ಅನುದಾನವನ್ನು ನಗರೋತ್ಥಾನ ಯೋಜನೆ ಅಡಿಯಲ್ಲಿ ಒದಗಿಸುವೆ ಎಂದು ಭರವಸೆ ನೀಡಿದರು.

ಕಟ್ಟಡ ಕಾಮಗಾರಿ ಮಾತ್ರ ಗುಣಮಟ್ಟದಿಂದ ಕೂಡಿರಬೇಕು. ಸಮುದಾಯಕ್ಕೆ ಅನುಕೂಲವಾಗಬೇಕು. ಅದರಂತೆ ಭವನ ನಿರ್ವಹಣೆ ಮಾಡುವುದು ಅಷ್ಟೇ ಕಷ್ಟದಾಯಕದ ಕೆಲಸವಾಗಿದೆ. ಸಮುದಾಯದ ಮುಖಂಡರು ಸ್ವಂತ ಮನೆಯಂತೆ ಸ್ವಚ್ಛತೆ ಹಾಗೂ ಸುರಕ್ಷತೆ ಕಡೆ ಹೆಚ್ಚಿನ ಗಮನರಿಸುವುದರ ಜತೆಗೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಗರಸಭೆ ಇಂಜಿನಿಯರ್ ನಾನಾ ಸಾಹೇಬ್ ಮಡಿವಾಳಕರ್, ರಫೀಕ್ ಅಹ್ಮದ್, ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ್, ತಾಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ರವಿಕುಮಾರ ಯಕ್ಷಿಂತಿ, ಶಿವಮಹಾಂತ ಚಂದಾಪುರ, ಭೀಮಣ್ಣ ಮಾಸ್ತರ ಬೂದನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net