ನಗರೋತ್ಥಾನ ಕಾಮಗಾರಿಗೆ ಭೂಮಿಪೂಜೆ

12-pnp 1
????????????????????????????????????
Published on

ಪಾಂಡವಪುರ: ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರೈತರನ್ನು ಎತ್ತಿಕಟ್ಟಿ ಕಾಮಗಾರಿ ತಡೆಯದಿದ್ದರೆ ಒಳಚರಂಡಿ ಕೆಲಸ ಪೂರ್ಣಗೊಂಡು ದಶಕಗಳೇ ಕಳೆಯುತ್ತಿತ್ತು ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳುವ ಮೂಲಕ ಮಾಜಿ ಶಾಸಕ ಸಿ.ಎಸ್.ಪುಟ್ಟಣ್ಣಯ್ಯ ಅವರು ರೈತರಿಗೆ ಜಮೀನಿಗೆ ಹೆಚ್ಚುವರಿ ಪರಿಹಾರಕ್ಕಾಗಿ ಆಗ್ರಹಿಸಿ ಕಾಮಗಾರಿಗೆ ಅಡ್ಡಿಪಡಿಸಿದ್ದನ್ನು ವಿರೋಧಿಸಿದರು.

ಪಟ್ಟಣದ ಶಾಂತಿನಗರದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 5.5 ಕೋಟಿ ರೂ.ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮೊದಲು ಬಾರಿ ಶಾಸಕನಾಗಿದ್ದ ವೇಳೆ ಪಾಂಡವಪುರ ಪಟ್ಟಣವನ್ನು ಮೈಸೂರಿಗೆ ಪರ್ಯಾಯ ನಗರದಂತೆ ನಿರ್ಮಿಸಲು ಉದ್ದೇಶಿಸಿ ಒಳಚರಂಡಿ ಕಾಮಗಾರಿ ಆರಂಭಿಸಿದ್ದೆ. ಅಂದು ಕೆಲವರು 5 ನಿಮಿಷ ಸುಮ್ಮನಿದ್ದು ಸಹಕರಿಸಿದ್ದರೆ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಕೆಲವರಿಂದಾಗಿ ಇಂದಿಗೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ರೈತರಿಂದ ವಶಪಡಿಸಿಕೊಂಡಿರುವ ಜಮೀನಿಗೆ 7 ಕೋಟಿ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ. ರೈತರ ಜತೆ ಮಾತುಕತೆ ನಡೆಸಿದ್ದು, ಕಾಮಗಾರಿಗೆ ಅಗತ್ಯವಿರುವ 11 ಕೊಟಿ ರೂ.ಅನುದಾನಕ್ಕೆ ಕ್ಯಾಬಿನೆಟ್ ಸಭೆಯಲ್ಲಿ ಮಂಜೂರಾತಿ ದೊರೆತ ನಂತರ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ನಗರೋತ್ಥಾನ ಯೋಜನೆಯ ಕಾಮಗಾರಿಗಳನ್ನು ಗುತ್ತಿಗೆ ಪಡೆದಿರುವ ಮನ್‌ಮುಲ್ ಅಧ್ಯಕ್ಷ ರಾಮಚಂದ್ರು ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಪುರಸಭೆ ಸದಸ್ಯರೂ ನಿಂತು ಕೆಲಸ ಪಡೆದುಕೊಳ್ಳಬೇಕು. ಪಟ್ಟಣದ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ ಮತ್ತಷ್ಟು ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.

ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಮುಖ್ಯಾಧಿಕಾರಿ ವೀಣಾ, ಇಂಜಿನಿಯರ್‌ಗಳಾದ ಚೌಡಪ್ಪ, ಯಶಸ್ವಿನಿ, ಸದಸ್ಯರಾದ ಶಿವಕುಮಾರ್, ಚಿಕ್ಕತಮ್ಮಣ್ಣ, ಬೀರಶೆಟ್ಟಹಳ್ಳಿ ಶಿವಣ್ಣ, ಚಂದ್ರು, ಆರ್.ಸೋಮಶೇಖರ್, ಸರಸ್ವತಿ, ಗೀತಾ ಆರ‌್ಮುಗಂ, ಬಿ.ವೈ.ಬಾಬು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net