

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ನಗರೋತ್ಥಾನ ಯೋಜನೆಯಡಿ ಮಂಜೂರಾಗಿ ಸ್ಥಗಿತವಾಗಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ನಗರಸಭಾ ಅಧ್ಯಕ್ಷೆ ಹಾಗೂ ಸದಸ್ಯರ ಜತೆಗೂಡಿ ಶಾಸಕ ಧೀರಜ್ ಮುನಿರಾಜು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ದೇವನಹಳ್ಳಿಯ ಜಿಲ್ಲಾಡಳಿತ ಭವನದ ಮುಂದೆ ಮೌನ ಪ್ರತಿಭಟನೆ ನಡೆಸಿದರು.
ಕಾಮಗಾರಿ ಅಪೂರ್ಣ:
ನಗರಸಭೆ ವ್ಯಾಪ್ತಿಯ ಚರಂಡಿ, ರಸ್ತೆ ಹಾಗೂ ಇತರೆ ಅಭಿವೃದ್ದಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು 18 ತಿಂಗಳ ಕಾಲಾವಧಿ ನಿಗದಿಪಡಿಸಿ1389. 37 ಲಕ್ಷ ರೂಪಾಯಿ ಮೊತ್ತದಲ್ಲಿ ಗುತ್ತಿಗೆಯ ಕಾರ್ಯಾದೇಶ ನೀಡಲಾಗಿತ್ತು ಇವರ ಗುತ್ತಿಗೆ ಅವದಿ 2024 ರ ಆ.21 ಕ್ಕೆ ಮುಕ್ತಾಯಗೊಂಡಿದ್ದು ಈವರೆವಿಗೂ ಶೇ. 25 ಕಾಮಗಾರಿ ನಡೆದಿದೆ ಎಂದು ಶಾಸಕ ಧೀರಜ್ ಮುನಿರಾಜು ಅಸಮಾಧಾನ ವ್ಯಕ್ತಪಡಿಸಿದರು. ಶೇ.75 ಕಾಮಗಾರಿ ಬಾಕಿ ಉಳಿದೆ. ಈ ಯೋಜನೆಯಡಿ ಕಾರ್ಯಾದೇಶವಾಗಿದ್ದ ರಸ್ತೆಗಳಿಗೆ ವೆಟ್‌ಮಿಕ್ಸ್ ಹಾಕಿ ಕೆಲವೆಡೆ ರಸ್ತೆ ಅಗೆದು ಹಾಗೇಯೇ ಬಿಟ್ಟು ವರ್ಷ ಕಳೆದಿದೆ ಈ ರಸ್ತೆಯಲ್ಲಿ ವಾಹನ ಸಂಚರಿಸಲು ಪರದಾಡುವಂತಾಗಿದೆ, ಹಾಗಾಗಿ ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿಕೊಡಬೇಕೆಂದು ಒತ್ತಾಯಿಸಿದರು.
ರಸ್ತೆ ಅಭಿವೃದ್ಧಿಯೂ ಸಾಧ್ಯವಾಗಿಲ್ಲ:
ಜನ ಅಭಿವೃದ್ಧಿಗಾಗಿ ನಮ್ಮನ್ನು ಆಯ್ಕೆ ಮಾಡಿದ್ದಾರೆ, ರಸ್ತೆಗಳ ಅಭಿವೃದ್ಧಿ ಮಾಡಲೂ ಸಾಧ್ಯವಾಗದ ಪರಿಸ್ಥಿತಿಗೆ ಬಂದಿದ್ದೇವೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಅಸಹಾಯಕತೆ ವ್ಯಕ್ತಪಡಿಸಿದರು. ಕಾಮಗಾರಿ ಬೇಗ ಗೊಳಿಸಿಕೊಡುವಂತೆ ಗುತ್ತಿಗೆದಾರರನ್ನು ಕೇಳಿದರೆ ನಾನು ಈಗಾಗಲೇ ಹೂಡಿಕೆ ಮಾಡಿರುವ ಬಾಕಿ ಬಿಲ್ಲ ಕೊಟ್ಟಿಲ್ಲ ಮುಂದಿನ ಕಾಮಗಾರಿಗೆ ಹಣ ಬಿಡುಗಡೆ ಮಾಡಿಲ್ಲ ಹಾಗಾಗಿ ನಾನು ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗುತ್ತಿದೆ ಎಂದು ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ ನಾವು ಬಿಜೆಪಿ ಸದಸ್ಯರು ಹೆಚ್ಚಾಗಿ ಇರುವುದರಿಂದ ನಮಗೆ ಕೆಟ್ಟ ಹೆಸರು ಬರಲಿ ಎಂದು ಸರ್ಕಾರ ಹಣ ಬಿಡುಗಡೆ ಮಾಡದೇ ಈ ರೀತಿ ವಿಳಂಬ ಧೋರಣೆ ಅನುರಿಸುತ್ತಿರುವುದಕ್ಕೆ ಬೇಸತ್ತು ಶಾಸಕರ ಜತೆಗೂಡಿ ಈ ಮೌನ ಪ್ರತಿಭಟನೆ ನಡೆಸಬೇಕಾಯಿತು ಎಂದರು.