ನಗರಸಭೆಯಿಂದ ರಸ್ತೆ ಬದಿ ಅಂಗಡಿ ತೆರವು ಕಾರ್ಯಚರಣೆ

ನಗರಸಭೆಯಿಂದ ರಸ್ತೆ ಬದಿ ಅಂಗಡಿ ತೆರವು ಕಾರ್ಯಚರಣೆ
Published on

ಹಾಸನ: ಮಹಾವೀರ ವೃತ್ತದಿಂದ ದೇವಿಗೆರೆ ವೃತ್ತದ ವರೆಗೆ ರಸ್ತೆಯ ಎರಡೂ ಬದಿ ತರಕಾರಿ, ಹೂವು, ಹಣ್ಣಿನ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಸಾಮಾಗ್ರಿಗಳನ್ನು ನಗರಸಭೆಯಿಂದ ತರವು ಮಾಡಲಾಯಿತು.
ನಿಗದಿತ ಜಾಗ ಮೀರಿ ರಸ್ತೆಗೆ ಸಾಮಾಗ್ರಿಗಳನ್ನು ಇಟ್ಟುಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕರು ನಗರಸಭೆಗೆ ಅನೇಕ ಬಾರಿ ಎಚ್ಚರಿಕೆ ನೀದರು. ಆ ಹಿನ್ನಲೆ ಪೌರ ಕಾರ್ಮಿಕರೊಂದಿಗೆ ಬಂದ ನಗರಸಭೆ ಇಂಜಿನೀಯರ್‌ಗಳು ರಸ್ತೆ ಮೇಲಿದ್ದ ವ್ಯಾಪಾರದ ಸಾಮಾಗ್ರಿಗಳನ್ನು ವಶಕ್ಕೆ ಪಡೆದು ತೆರವುಗೊಳಿಸಿದರು.
ನಗರಸಭೆ ಪರಿಸರ ಇಂಜಿನೀಯರ್ ವೆಂಕಟೇಶ್ ಅವರು ಮಾತನಾಡಿ, ವ್ಯಾಪಾರ ವಹಿವಾಟು ನಡೆಸುವುದಕ್ಕಾಗಿ ನಗರಸಭೆಯಿಂದ ಅನುವು ಮಾಡಿಕೊಡಲಾಗಿದೆ. ಆದರೆ ದಿನದಿಂದ ದಿನಕ್ಕೆ ವ್ಯಾಪಾರಿಗಳು ರಸ್ತೆಯನ್ನೇ ಆಕ್ರಮಿಸಿಕೊಳ್ಳುತ್ತಿದ್ದರು. ವಾಹನ ಓಡಾಟಕ್ಕೆ ಅವಕಾಶ ಸಿಗದೆ ಟ್ರಾಫಿಕ್ ಜಾಮ್ ಹಾಗು ಅಪಘಾತಗಳು ಸಂಭವಿಸುತ್ತಿದ್ದವು. ಹೀಗಾಗಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಗರ ಸ್ವಚ್ಛತೆಗೆ ಕಾರ್ಮಿಕರು ಹಗಲು ರಾತ್ರಿ ಕಷ್ಟಪಡುತ್ತಾರೆ. ವ್ಯಾಪಾರಿಗಳು ಕಸವನ್ನು ಎಲ್ಲಿ ಬೇಕೆಂದರಲ್ಲಿ ಎಸೆಯುತ್ತಾರೆ. ಸಾರ್ವಜನಿಕರ ಸಹಕಾರ ಇಲ್ಲದೆ ಯಾವ ಕಾರ್ಯವೂ ಗುರಿ ತಲುಪುವುದಿಲ್ಲ. ಅನೈರ್ಮಲ್ಯದಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಅದರಿಂದ ಡೆಂಗ್ಯೂ ಮತ್ತಿತರ ಕಾಯಿಲೆಗಳು ಹರಡುತ್ತಿವೆ. ಮಳೆಗಾಲವಾದ್ದರಿಂದ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ವ್ಯಾಪಾರಿಗಳು ಸರ್ಕಾರದ ನಿಯಮ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಟ್ಟಿನಕೆರೆ ಮಾರುಕಟ್ಟೆ ವ್ಯಾಪ್ತಿಯಲ್ಲಿ ಕಸದ ದುರ್ವಾಸನೆ ಬೀರುತ್ತಿದೆ. ನಿಷ್ಟ್ರಯೋಜಕ ಟೈರು, ತೆಂಗಿನ ಚಿಪ್ಪು ಎಲ್ಲೆಂದರಲ್ಲಿ ಹಾಕಿದ್ದಾರೆ. ಸ್ವಚ್ಛತೆ ಕಾಪಾಡಿಕೊಳ್ಳದ ವ್ಯಾಪಾರಿಗಳಿಗೂ ಕಠಿಣ ಸಂದೇಶ ನೀಡಲಾಗಿದೆ. ಇನ್ನಾದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದರು.
ನಗರಸಭೆ ಆರೋಗ್ಯ ನಿರೀಕ್ಷಕ ಆದೀಶ್ ಕುಮಾರ್, ಪ್ರಸಾದ್, ಚೇತನ್, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net