

ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಗದ್ದಲ, ಪ್ರತಿ ಪಕ್ಷದಿಂದ ಪ್ರತಿಭಟನೆ ಸಭಾಂಗಣದೊಳಗೆ ನಡೆದರೆ, ಹೊರ ಭಾಗದಿಂದ ಬೀದಿ ಬದಿ ವ್ಯಾಪಾರಸ್ಥರು ಸಭೆಯೊಳಗೆ ನುಗ್ಗಲು ಯತ್ನಿಸಿದ ಪ್ರಸಂಗಗಳು ಎದುರಾದವು.
ಬೆಳಗ್ಗೆ ೧೧.೧೫ಕ್ಕೆ ಸಭೆ ಆರಂಭವಾಗಿ ಸಭೆಯಲ್ಲಿ ಸ್ವಾಗತ ಕೋರುತ್ತಿದ್ದಂತೆ ಸಭಾಂಗಣದ ದ್ವಾರದಲ್ಲಿ ನಿಂತಿದ್ದ ಸುಮಾರು ೧೦- ೧೫ ಮಂದಿ ಬೀದಿ ಬದಿ ವ್ಯಾಪಾರಸ್ಥರು ನಗರಸಭೆ ವಿರುದ್ಧ ಘೋಷಣೆ ಹಾಕಿದರು. ಕೆಲವೇ ಕ್ಷಣದಲ್ಲಿ ನಗರಸಭೆ ಸಭಾಂಗಣದ ಪ್ರವೇಶ ದ್ವಾರಕ್ಕೂ ಪ್ರತಿಭಟನಾಕಾರರು ಕೈ ಹಾಕಿ ಒಳಗೆ ನುಗ್ಗಲು ಯತ್ನಿಸಿದರು. ಆಗ ಸ್ಥಳದಲ್ಲಿಯೇ ಇದ್ದ ನಗರಸಭೆ ಸಿಬ್ಬಂದಿ ತಡೆದು ಹೊರಗೆ ಕಳುಹಿಸಿದರು. ಆದರೂ ಪ್ರತಿಭಟನೆ ಮುಂದುವರೆಸಿದರು.
ಇದೇ ವಿಷಯವಾಗಿ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಬೀದಿ ಬದಿ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ಅವರಿಂದ ಆದಾಯ ನಿರೀಕ್ಷೆ ಮಾಡುತ್ತಿz್ದೆÃವೆ. ಇನ್ನೊಂದೆಡೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಬೇಡಿ ಎಂದು ತೊಂದರೆ ಕೊಡುತ್ತಿದ್ದರೆ ಅವರುಗಳು ಎಲ್ಲಿಗೆ ಹೋಗಬೇಕು ಎಂದು ಕಾಂಗ್ರೆಸ್ ಸದಸ್ಯರಾದ ಮುನೀರ್, ಶಾದಬ್, ಲಕ್ಷö್ಮಣ್ ಅವರು ಪ್ರಶ್ನಿಸಿದರು. ಇದಕ್ಕೆ ನಗರಸಭೆ ಮಾಜಿ ಅಧ್ಯಕ್ಷೆ ಸುಜಾತ ಶಿವಕುಮಾರ್ ಬೆಂಬಲ ಸೂಚಿಸಿದರು.
ರಸ್ತೆ ಬದಿಯಲ್ಲಿ ನಿಂತು ವ್ಯಾಪಾರ ಮಾಡಬೇಡಿ ಎಂದು ಹೇಳಿz್ದÉÃವೆ. ತಳ್ಳುವ ಗಾಡಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗಿ ವ್ಯಾಪಾರ ಮಾಡಬೇಕೆಂದು ಹೇಳಿz್ದÉÃವೆ ಎಂದು ಆಯುಕ್ತ ಬಿ.ಸಿ.ಬಸವರಾಜ್ ಸಮಾಜಾಯಿಸಿ ನೀಡಿದರು.
ಪುಟ್ ಪಾತ್ ತೆರವು ಸ್ವಾಗತ. ಸುಂಕ ವಸೂಲಿಗೆ ಒಂದೆಡೆ ಟೆಂಡರ್ ಕೊಟ್ಟು ಇನ್ನೊಂದು ವ್ಯಾಪಾರ ಮಾಡಬೇಡಿ ಎಂದು ಹೇಳುವುದು ಸರಿಯಲ್ಲ. ಈ ರೀತಿಯಲ್ಲಿ ಪ್ರತಿಭಟನೆ ಮಾಡಿ ಬ್ಲಾಕ್ ಮೇಲ್ ಮಾಡುವುದು ನಡೆಯೋದಿಲ್ಲ. ಬೀದಿ ಬದಿ ವ್ಯಾಪಾರಸ್ಥರು ಹಾಗೂ ನಗರಸಭೆ ಸದಸ್ಯರು ಒಳಗೊಂಡ ಸಭೆಯನ್ನು ಕರೆದು ಸೂಕ್ತವಾದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನಗರಸಭೆ ಸದಸ್ಯ ಟಿ. ರಾಜಶೇಖರ್ ಸಲಹೆ ನೀಡಿದರು. ಇದಕ್ಕೆ ಇತರೆ ಸದಸ್ಯರು ಒಪ್ಪಿಗೆ ಸೂಚಿಸಿದರು.
ಹೈ ಡ್ರಾಮಾ
ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಮಾತ್ರ ಪ್ರತ್ಯೇಕ ಕೊಠಡಿ ಇದೆ. ಇನ್ನುಳಿದಂತೆ ಸದಸ್ಯರು ಕಚೇರಿಯ ಹೊರ ಭಾಗದಲ್ಲಿ ನಿಲ್ಲುವ ಹಾಗೂ ಓಡಾಡುವ ಸ್ಥಿತಿ ಇದೆ. ಹಾಗಾಗಿ ಸದಸ್ಯರಿಗೆ ಕುಳಿತುಕೊಳ್ಳಲು ಪ್ರತ್ಯೇಕವಾದ ಕೊಠಡಿಯೊಂದನ್ನು ತೆರೆಯಲು ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಈ ವಿಷಯವನ್ನು ಇಂದಿನ ಸಭೆಯಲ್ಲಿ ಪುನಾರುಚ್ಚರಿಸಿದ ಜೆಡಿಎಸ್ ನಗರಸಭೆ ಸದಸ್ಯ ಎ.ಸಿ. ಕುಮಾರ್‌ಗೌಡ, ಸದಸ್ಯರಿಗೆ ಪ್ರತ್ಯೇಕ ಕೊಠಡಿ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆಯೇ? ಎಂದು ಪ್ರಶ್ನಿಸಿದರಲ್ಲದೆ ನನಗೆ ಗೊತ್ತಿರುವ ಮಾಹಿತಿಯ ಪ್ರಕಾರ ಇಲ್ಲ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಏರು ಧ್ವನಿಯಲ್ಲಿ ಮಾತನಾಡಿದರು.
ನಗರಸಭೆ ಅಧ್ಯಕ್ಷರು ನಿಮ್ಮ ಪಕ್ಷದವರು, ನೀವು ಬಂದರೆ ಅವರ ಕೊಠಡಿಯಲ್ಲಿ ಕುಳಿತುಕೊಳ್ಳುತ್ತೀರಿ. ನಾವೆಲ್ಲಿ ಕುಳಿತುಕೊಳ್ಳಬೇಕು. ಹಿಂದಿನ ಸಭೆಯಲ್ಲಿ ಬಿಜೆಪಿಯವರು ಅಧ್ಯಕ್ಷರಾಗಿದ್ದಾಗ ಒಪ್ಪಿಗೆ ಸೂಚಿಸಿ, ಇದೀಗ ಬೇರೆ ಮಾತನಾಡಿದರೆ ಹೇಗೆಂದು ಪ್ರಶ್ನಿಸಿದರು. ಹೀಗೆ ಮಾತಿಗೆ ಮಾತು ಬೆಳೆದು ಕಾಂಗ್ರೆಸ್‌ನ ನಗರಸಭೆ ಸದಸ್ಯರು ಸಭಾ ತ್ಯಾಗ ಮಾಡಿದರು. ಸಭಾಂಗಣದ ಹೊರಗೆ ನಿಂತು ಅಧ್ಯಕ್ಷರ ವಿರುದ್ಧ ಘೋಷಣೆ ಹಾಕಿದರು. ಬಳಿಕ ಮಧ್ಯ ಪ್ರವೇಶ ಮಾಡಿದ ಮುನೀರ್ ಅವರು ತಮ್ಮ ಪಕ್ಷದ ಸದಸ್ಯರ ಮನವೊಲಿಸಿ ಸಭೆಗೆ ಕರೆದುಕೊಂಡು ಬಂದರು.
ಮತ್ತೆ ಸಭೆ ಮುಂದುವರೆಯುತ್ತಿದ್ದAತೆ ಟಿ.ರಾಜಶೇಖರ್ ಮಾತನಾಡಿ, ಅಧ್ಯಕ್ಷರ ವಿರುದ್ಧ ಘೋಷಣೆ ಹಾಕುವುದು ಸರಿಯಲ್ಲ. ಎಲ್ಲ ಸದಸ್ಯರ ಹಿತದೃಷ್ಠಿಯಿಂದ ಪ್ರತ್ಯೇಕ ಕೊಠಡಿಯ ಅವಶ್ಯಕತೆ ಇದೆ. ಕಡಿಮೆ ಖರ್ಚಿನಲ್ಲಿ ಸೂಕ್ತವಾದ ಜಾಗದಲ್ಲಿ ಈ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ
ಚಿಕ್ಕಮಗಳೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಅತಿಯಾಗಿರುವ ವಿಷಯ ಸಭೆಯಲ್ಲಿ ಚರ್ಚೆಗೆ ಬರುತ್ತಿದ್ದಂತೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಹೇಮಂತ್ ಮಾತನಾಡಿ, ಬೀದಿ ನಾಯಿಗಳನ್ನು ಸಾಯಿಸಲು ಅವಕಾಶ ಇಲ್ಲ. ಅವುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವುದು ಕೂಡ ತಪ್ಪು. ಅವುಗಳಿಗೆ ಸಂತನಾ ಹರಣ ಚಿಕಿತ್ಸೆ ನೀಡಲು ಮಾತ್ರ ಅವಕಾಶ ಇದೆ ಎಂದರು.
ಈ ವಿಷಯಕ್ಕೆ ಸಂಬAಧಿಸಿದAತೆ ನಗರಸಭೆ ಆಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಬೀದಿ ನಾಯಿಗಳಿಗೆ ಶಸ್ತç ಚಿಕಿತ್ಸೆ ಮಾಡುವ ಸಂಬAಧ ೩ ಬಾರಿ ಟೆಂಡರ್ ಕರೆಯಾಗಿತ್ತು. ಯಾರೂ ಕೂಡ ಟೆಂಡರ್ ಹಾಕಿರಲಿಲ್ಲ. ಈ ಬಾರಿ ಮತ್ತೆ ಟೆಂಡರ್ ಕರೆಯಲಾಗಿದೆ. ಸಂಬAಧಿತ ಸಂಸ್ಥೆಯವರನ್ನು ಸಂಪರ್ಕಿಸಿ ಮಾತನಾಡಿz್ದÉÃವೆ. ಈ ಹಿಂದೆ ೨ ಸಾವಿರ ನಾಯಿಗಳಿಗೆ ಶಸ್ತç ಚಿಕಿತ್ಸೆ ಮಾಡಿz್ದÉÃವೆ. ಇದಕ್ಕಾಗಿ ಈ ಬಾರಿ ೩೫ ಲಕ್ಷ ರೂಪಾಯಿ ಮೀಸಲಿಟ್ಟಿz್ದÉÃವೆ ಎಂದು ಹೇಳಿದರು.