

ಚಿಕ್ಕಮಗಳೂರು: ನಗರಸಭೆ ಆಡಳಿತ ಮಂಡಳಿಗೆ ಪ್ರಭಾರ ಅಧ್ಯಕ್ಷರಾಗಿ ಅನು ಮಧುಕರ್ ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಹಿಂದಿನ ಅಧ್ಯಕ್ಷರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಭಾರ ಅಧ್ಯಕ್ಷರಾಗಿ ಅನು ಮಧುಕರ್ ಅವರು ಅಧಿಕಾರ ವಹಿಸಿಕೊಂಡರು.
ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್ ಮಾತನಾಡಿ, ಸಿಕ್ಕಿರುವ ಅವಧಿ ಮುಖ್ಯವಲ್ಲ. ಎಲ್ಲರ ವಿಶ್ವಾ ಸದೊಂದಿಗೆ ಆಡಳಿತ ನೀಡುವುದು ಧ್ಯೇಯವಾಗಿರಬೇಕು. ನಗರದ ಪ್ರಥಮ ಪ್ರಜೆ ಹುದ್ದೆ ಅಲಂಕರಿಸಿರುವ ನೂತನ ಅಧ್ಯಕ್ಷರು ಚುರುಕುತನದಿಂದ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ನಗರಸಭೆ ಸದಸ್ಯರಾದ ಕವಿತಾ ಶೇಖರ್, ರೂಪ, ಮಧುಕುಮಾರ್ ರಾಜ್ ಅರಸ್, ಮಣಿಕಂಠ, ಅಮೃತೇಶ್, ಗೋಪಿ, ಎ.ಸಿ.ಕುಮಾರ್, ಲಲಿತಾ ರವಿನಾಯ್ಕ್, ಆಯುಕ್ತ ಬಿ.ಸಿ. ಬಸವರಾಜ್, ಮುಖಂಡರಾದ ಎಚ್.ಕೆ. ಕೇಶವ ಮೂರ್ತಿ, ಕೌಶಿಕ್, ಕೆ.ಆರ್.ಅನಿಲ್‌ಕುಮಾರ್, ರವಿನಾಯ್ಕ್, ಚೈತ್ರಗೌಡ, ಮಧುಕರ್, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.