ನಗರಸಭೆಗೆ 5 ಕೋಟಿ ರೂ. ಉಳಿತಾಯದ ಬಜೆಟ್​, 119.41 ಕೋಟಿ ರೂ.ಆದಾಯ ನಿರೀಕ್ಷೆ, 114.44ಕೋಟಿ ರೂ.ಖರ್ಚು

Published on
ಕೋಲಾರ ನಗರಸಭೆಯಲ್ಲಿ ಅಧ್ಯಕ್ಷೆ ಶ್ವೇತಾಶಬರೀಶ್​ ಬಜೆಟ್​ ಮಂಡಿಸಿದರು. ಶಾಸಕ ಕೆ.ಶ್ರೀನಿವಾಸಗೌಡ, ಉಪಾಧ್ಯಕ್ಷ ಜುಗ್ನು ಆಸ್ಲಾಂ, ಪೌರಾಯುಕ್ತ ಶಿವಾನಂದ ಇದ್ದರು.
ಕೋಲಾರ ನಗರಸಭೆಯಲ್ಲಿ ಅಧ್ಯಕ್ಷೆ ಶ್ವೇತಾಶಬರೀಶ್​ ಬಜೆಟ್​ ಮಂಡಿಸಿದರು. ಶಾಸಕ ಕೆ.ಶ್ರೀನಿವಾಸಗೌಡ, ಉಪಾಧ್ಯಕ್ಷ ಜುಗ್ನು ಆಸ್ಲಾಂ, ಪೌರಾಯುಕ್ತ ಶಿವಾನಂದ ಇದ್ದರು.

ಕೋಲಾರ
ನಗರಸಭೆಯಲ್ಲಿ 2023&24ನೇ ಸಾಲಿನ ಆಯವ್ಯಯ ಮಂಡನೆಯಾಗಿದ್ದು, 4 ಕೋಟಿ 97 ಲಕ್ಷ ರೂ.ಗಳ ಉಳಿತಾಯದ ಬಜೆಟ್​ನ್ನು ಮಂಡಿಸಲಾಯಿತು.
ನಗರಸಭೆ ಕಾರ್ಯಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಬಜೆಟ್​ ಮಂಡಿಸಿ ಮಾತನಾಡಿದ ಅಧ್ಯಕ್ಷೆ ಶ್ವೇತಾ ಶಬರೀಶ್​, 119.41 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದ್ದು, 114.44 ಕೋಟಿ ರೂಪಾಯಿ ಖರ್ಚು ಮಾಡಲಾಗುವುದು ಎಂದರು.
ಇನ್ನು ಸರ್ಕಾರದಿಂದ ಎಸ್​ಎಫ್​ಸಿ ಅನುದಾನ ರಾಜ್ಯ ಹಣಕಾಸು ಆಯೋಗದ ಅನುದಾನ 2.59 ಕೋಟಿ ರೂಪಾಯಿ, ವೇತನ ಅನುದಾನ 5.22ಕೋಟಿ ರೂ., ವಿದ್ಯುತ್​ ಶಕ್ತಿ ಅನುದಾನ 21.58 ಕೋಟಿ, ಶಾಸಕರ ಅನುದಾನ 5 ಲಕ್ಷ ರೂ., ಸ್ವಚ್ಛ ಭಾರತ್​ ಮಿಷನ್​ ಅನುದಾನ 25 ಲಕ್ಷ ರೂ., ಎಸ್​ಎಫ್​ಸಿ ಬರ ಪರಿಹಾರ ಅನುದಾನ 15 ಲಕ್ಷ ರೂ., 15ನೇ ಹಣಕಾಸು ಯೋಜನೆ ಅನುದಾನ 5.71 ಕೋಟಿ ರೂ., ಅಮೃತ ಯೋಜನೆ ಅನುದಾನ 7.88 ಕೋಟಿ ರೂ., ಜಿಲ್ಲಾಧಿಕಾರಿ ಸಿಆರ್​ಎಫ್​ ಅನುದಾನ 20 ಲಕ್ಷ ರೂ., ಪೌರಕಾರ್ಮಿಕರ ಆಶ್ರಯ ಯೋಜನೆ 2.74 ಕೋಟಿ ರೂ., ಎಸ್​ಎಫ್​ಸಿ ವಿಶೇಷ ಅನುದಾನ 4.66ಕೋಟಿ ರೂ., ಬಂಡವಾಳ ಆದಾಯ 4 ಕೋಟಿ ರೂ., ಶೇಕಡಾ 24.10, 7.25, 5 ಮತ್ತು 1ರ ಅಭಿವೃದ್ಧಿಗಾಗಿ 77 ಲಕ್ಷ ರೂ., ಅಸಾಮಾನ್ಯ ಸಾಲ 8.46 ಕೋಟಿ ಹಾಗೂ ಪ್ರಾರಂಭಿಕ ಶುಲ್ಕ 38.19ಕೋಟಿ ರೂ. ಸೇರಿ ಒಟ್ಟು ಅದಾಯ 119.41 ಕೋಟಿ ರೂ. ನಿರೀಕ್ಷಿತ ಆದಾಯವಾಗಿದೆ ಎಂದು ವಿವರಿಸಿದರು. ನಗರಸಭೆ ಸದಸ್ಯರಾದ ಅಪ್ಸರ್​, ಪ್ರಸಾದ್​ ಬಾಬು ಮಾತನಾಡಿ, ನಗರಸಭೆಯ ಇತಿಹಾಸದಲ್ಲಿ ಪ್ರಪ್ರಥಮವಾಗಿ 4 ಕೋಟಿ ಉಳಿತಾಯ ಬಜೆಟ್​ ಮಂಡಿಸಿದ ಮಹಿಳಾ ಅಧ್ಯಕ್ಷೆ ಶ್ವೇತಾ ಶಬರೀಶ್​ರಿಗೆ ಅಭಿನಂದನೆ ಸಲ್ಲಿಸಿದರು. ಸಭೆಯ ಆರಂಭಕ್ಕೆ ಮೊದಲು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್​ ನಿಧನಕ್ಕೆ ಮೌನಚರಣೆ ಮೂಲಕ ಸಂತಾಪ ವ್ಯಕ್ತಪಡಿಸಿದರು. ಶಾಸಕ ಕೆ.ಶ್ರೀನಿವಾಸಗೌಡ, ಉಪಾಧ್ಯಕ್ಷ ಜುಗ್ನು ಆಸ್ಲಾಂ, ಪೌರಾಯುಕ್ತ ಶಿವಾನಂದ ಇದ್ದರು.

ನೀರು ಸರಬರಾಜಿಗೆ 14.06 ಕೋಟಿ ರೂ.: ನಗರದ 35 ವಾರ್ಡ್​ಗಳ ನೈರ್ಮಲ್ಯೀಕರಣಕ್ಕೆ 5.35 ಕೋಟಿ ರೂ., ರಸ್ತೆ ದುರಸ್ತಿ, ರಸ್ತೆ ಮೆಟಿಲಿಂಗ್​ಗೆ 50 ಲಕ್ಷ ರೂ., ಬೀದಿ ದೀಪ ನಿರ್ವಹಣೆ, ವಿದ್ಯುತ್​ ಬಿಲ್​ಗೆ 7.52 ಕೋಟಿ ರೂ., ನೀರು ಸರಬರಾಜು ವಿದ್ಯುತ್​ ಬಿಲ್​ಗೆ 14.06 ಕೋಟಿ ರೂ., ಬೀದಿ ದೀಪ ನಿರ್ವಹಣೆಗೆ 1.20 ಕೋಟಿ ರೂ., ಪೈಪ್​ಲೈನ್​ ಮತ್ತು ಪಂಪ್​ ಮೋಟ ರ್​ ದುರಸ್ತಿಗೆ 5.50 ಕೋಟಿ ರೂ., ಘನ ತ್ಯಾಜ್ಯ ವಸ್ತು ಸಂಗ್ರ ಹಣೆಗೆ ಸಲಕರಣೆ ಖರೀದಿಗೆ 35 ಲಕ್ಷ ರೂ., ಜಮೀನು ಖರೀದಿಗೆ 10 ಕೋಟಿ ರೂ., ಕಟ್ಟಡ ನಿಮಾರ್ಣಕ್ಕೆ 1 ಕೋಟಿ ರೂ., ವಾಹನ ಖರೀದಿಗೆ 70 ಲಕ್ಷ ರೂ., ಹೊಸ ರಸ್ತೆ ನಿಮಾರ್ಣಕ್ಕೆ 3.03 ಕೋ.ರೂ., ಹೊಸ ಚರಂಡಿ ನಿಮಾರ್ಣಕ್ಕೆ 7.49 ಕೋ.ರೂ.ವ್ಯಯಿಸಲಾಗುವುದು ಎಂದರು.

ವೇತನ ಪಾವತಿಗೆ 8.08 ಕೋಟಿ ರೂ. : ಬೀದಿ ದೀಪ ಖರೀದಿಗೆ 84.35 ಲಕ್ಷರೂ., ಕಸಾಯಿಖಾನೆ ನಿಮಾರ್ಣಕ್ಕಾಗಿ 30 ಲಕ್ಷ ರೂ., ವೇತನ ಪಾವತಿಗೆ 8.08 ಕೋಟಿ, ಹೊಸ ಬೋರ್​ವೆಲ್​ ಕೊರೆಯುವುದಕ್ಕೆ 1.04ಕೋಟಿರೂ., ಹೊಸ ಪಂಪ್​ಸೆಟ್​ ಖರೀದಿಗೆ 3.37 ಕೋಟಿರೂ., ಹೊಸ ಪೈಪ್​ ಲೈನ್​ ಅಳವಡಿಕೆಗೆ 96.66 ಲಕ್ಷ ರೂ., ಒಳಚರಂಡಿ ಸಂರ್ಪಕಕ್ಕೆ 50.09ಲಕ್ಷ ರೂ., ಪಾರ್ಕ್​ ಅಭಿವೃದ್ಧಿ ಮತ್ತು ಅರಣ್ಯೀಕರಣಕ್ಕೆ 1.26 ಕೋಟಿ ರೂ., ಮಾರುಕಟ್ಟೆ ನಿಮಾರ್ಣಕ್ಕೆ 5 ಕೋಟಿ ರೂ., ಇತರ ವೆಚ್ಚಗಳು 8.64 ರೂ ಕೋಟಿ ರೂ., ಇತರೆ ಬಂಡವಾಳ ವೆಚ್ಚಗಳು 11.83 ಕೋಟಿ ರೂ., ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಗೆ 1.74ಕೋಟಿ ರೂ., ಅಸಾಮಾನ್ಯ ಸಾಲ ಮತ್ತು ಅಮಾನತ್​ ಖಾತೆಗೆ 12.17ಕೋಟಿ ರೂ., ಶೇ 24,10, ಶೇ.7, ಶೇ.25, ಶೇ.5 ಮತ್ತು ಶೇ1ರ ಅಭಿವೃದ್ಧಿಗೆ 1.95 ಕೋಟಿ ರೂ. ಸೇರಿ ಒಟ್ಟು 114.44 ಕೋಟಿ ವೆಚ್ಚವಾಗಲಿದೆ ಎಂದು ವಿವರಿಸಿದರು.

ವಿವಿಧ ಪ್ರಮುಖ ಅನುದಾನಗಳು

  • ನಗರಸಭೆಗೆ ಆಸ್ತಿ ತೆರಿಗೆ 8.90 ಕೋಟಿ ರೂ.
  • ನೀರಿನ ಬಳಕೆದಾರರ ಶುಲ್ಕ 99.98 ಲಕ್ಷ ರೂ.
  • ಘನತ್ಯಾಜ್ಯ ನಿರ್ವಹಣೆ ಶುಲ್ಕ 70ಲಕ್ಷ ರೂ.
  • ಮಳಿಗೆಗಳ ಬಾಡಿಗೆ 68 ಲಕ್ಷ ರೂ.,
  • ಕಟ್ಟಡಗಳ ಪರವಾನಗಿ ಶುಲ್ಕ 60 ಲಕ್ಷ ರೂ.
  • ಲೈಸನ್ಸ್​ ಫೀಯಿಂದ 38 ಲಕ್ಷ ರೂ.
  • ಒಳಚರಂಡಿ ಬಳಕೆ ಹಾಗೂ ಸಂಪರ್ಕ ಶುಲ್ಕ 47 ಲಕ್ಷ ರೂ.
  • ಮಾರುಕಟ್ಟೆ, ಬಸ್​ ನಿಲ್ದಾಣ ಮತ್ತು ಸಂತೆ ಶುಲ್ಕ 15.75 ಲಕ್ಷ ರೂ.
  • ಜಾಹೀರಾತು ತೆರಿಗೆ 7,68 ಲಕ್ಷ ರೂ.
  • ಇತರ ವಸೂಲಿ 3.89 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net