ನಗರಸಭೆ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಿ; ರೈತ ಸಂಘದಿಂದ ಪೌರಾಯುಕ್ತ ಶಿವಾನಂದ್‌ಗೆ ಮನವಿ

16kolar4- raitha sanga
Published on

ಕೋಲಾರ: ನಗರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಕಳಪೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಲು ಪ್ರತ್ಯೇಕ ತಂಡ ರಚನೆ ಮಾಡಬೇಕು ಹಾಗೂ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪೌರಾಯುಕ್ತ ಶಿವಾನಂದ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.


ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕೋಲಾರ ನಗರಸಭೆಯು ಭ್ರಷ್ಟಚಾರದ ಕೂಪವಾಗಿದೆ. ಸಾರ್ವಜನಿಕರು ಯಾವುದೇ ಸೌಲಭ್ಯ ಪಡೆದುಕೊಳ್ಳಬೇಕಾದರೆ ಲಂಚ ಕೊಡದಿದ್ದು ಕೆಲಸ ಆಗುವುದಿಲ್ಲ ಎಂಬ ಆರೋಪ ಇದೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಸ್ಥಳೀಯ ಸಂಸ್ಥೆಗಳ ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳದೆ ಇರುವುದು ವಿಷಾದನೀಯ. ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.


ಸ್ವಚ್ಛತೆಗೆ ಕೋಟ್ಯಂತರ ರೂ. ಅನುದಾನ ಬಂದರೂ ಸ್ವಚ್ಛತೆ ಮರಿಚೀಕೆಯಾಗಿ ಉಚಿತವಾಗಿ ಬಡವರಿಗೆ ರೋಗ ಹಂಚುವ ಇಲಾಖೆಯಾಗಿದೆ. ಒಂದೆಡೆ ದಲ್ಲಾಳಿಗಳ ಅರ್ಭಟ ಮತ್ತೊಂದೆಡೆ ಕಳಪೆ ಕಾಮಗಾರಿಗಳು ಅನುಕಂಪ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವಿದ್ಯಾಭ್ಯಾಸಕ್ಕೆ ತಕ್ಕಂತೆ ಹುದ್ದೆ ಕೊಡದೆ ಉನ್ನತ ಮಟ್ಟದ ಹುದ್ದೆ ಕೊಟ್ಟು ಭ್ರಷ್ಟಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.


ಕೋಲಾರ ನಗರಸಭೆಯಲ್ಲೇ ಬಹುವರ್ಷಗಳಿಂದ ಹಲವು ಅಧಿಕಾರಿ, ಸಿಬ್ಬಂದಿ ಇಲ್ಲೇ ಠಿಕಾಣಿ ಹೂಡಿದ್ದಾರೆ. ಅವರಿಗೆ ಜನಪರ ಕೆಲಸ ವಾಡಬೇಕೆಂಬ ಕಾಳಜಿಯಿಲ್ಲ. ಸಾರ್ವಜನಿಕರ ಹಿತಾಸಕ್ತಿಗಿಂತ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ. ಅವರು ಬರುವ ಅದಾಯಕ್ಕಿಂತ ಹೆಚ್ಚು ಅಸ್ತಿ ಗಳಿಸಿದ್ದು ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.


ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ವಾತನಾಡಿ, ಮಳೆ ಆರಂಭವಾಗಿದ್ದು ನಗರಾದ್ಯಂತ ಒತ್ತುವರಿ ಆಗಿರುವ ಚರಂಡಿ, ರಾಜಕಾಲುವೆಗಳ ದುರಸ್ತಿ ಇಲ್ಲ. ಮಳೆಗಾಲದಲ್ಲಿ ಅನಾಹುತಗಳು ಸಂಭವಿಸುವ ಮುನ್ನವೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು. ನಗರಸಭೆಯ ಕಂದಾಯ ವಿಭಾಗವಂತು ಭ್ರಷ್ಟಚಾರದ ತವರು ಮನೆಯಂತಾಗಿದೆ. ಯಾವುದೇ ಸೌಲಭ್ಯ ಪಡೆದುಕೊಳ್ಳಲು ಅರ್ಜಿದಾರನ ಚಪ್ಪಲಿ ಸವೆದರು ಕೆಲಸ ವಾತ್ರ ಆಗುವುದಿಲ್ಲ. ಕಡತ ವಿಲೇವಾರಿಗೆ ದರ ನಿಗದಿ ವಾಡಿದ್ದಾರೆ. ದುಡ್ಡು ಕೊಡುವ ಹಾಗೂ ಬ್ರೋಕರ್ ಅರ್ಜಿ ವಾತ್ರ ಬೇಗ ವಿಲೇವಾರಿ ಆಗುತ್ತದೆ. ಇದೆಲ್ಲ ಮೇಲಧಿಕಾರಿಗಳ ಗಮನಕ್ಕೆ ಇದ್ದರು ಯಾಕೆ ಮೌನಕ್ಕೆ ಒಳಗಾಗಿದ್ದಾರೆ ಎಂದು ಪ್ರಶ್ನಿಸಿದರು. ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಪದಾಧಿಕಾರಿಗಳಾದ ತಿಮ್ಮಣ್ಣ, ವೆಂಕಟೇಶಪ್ಪ, ನಾರಾಯಣಗೌಡ, ರಾಜು, ಗೀರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net