ನಗರಸಭೆ ಪೌರಾಯುಕ್ತರನ್ನು ವಜಾಗೊಳಿಸಿ

17-08-Shiva-1
ಅಂಬೇಡ್ಕರ್‌ಗೆ ಅಪಮಾನ ಮಾಡಿದ ನಗರಸಭೆ ಪೌರಾಯುಕ್ತರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಮುಂದೆ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಒಕ್ಕೂಟದ ಸಂಚಾಲಕ ಎಸ್.ಮಾರೆಪ್ಪ, ಪದಾಕಾರಿಗಳಾದ ರವೀಂದ್ರನಾಥ ಪಟ್ಟಿ, ಜೆ.ಬಿ.ರಾಜು, ಹೇಮರಾಜ ಅಸ್ಕಿಹಾಳ, ಎಂ.ಆರ್.ಭೇರಿ, ಜನಾರ್ದನ ಹಳ್ಳಿಬೆಂಚಿ, ಎಸ್.ರಾಜು, ಅನಿಲ್‌ಕುಮಾರ್, ರಾಘವೇಂದ್ರ ಬೋರಡ್ಡಿ, ರಾಜು ಪಟ್ಟಿ ಇದ್ದರು.
Published on

ರಾಯಚೂರು: ನಗರಸಭೆಯಲ್ಲಿ ಸ್ವಾತಂತ್ರೋತ್ಸವ ದಿನದಂದು ಧ್ವಜಾರೋಹಣ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರ ಇಡದೇ ಅಪಮಾನ ಮಾಡಿರುವ ನಗರಸಭೆ ಪೌರಾಯುಕ್ತ ಗುರುಸಿದ್ಧಯ್ಯಸ್ವಾಮಿಯನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಸರ್ಕಾರಿ ಇಲಾಖೆಗಳಲ್ಲಿ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರ ಇಟ್ಟು ಪೂಜಿಸಬೇಕು ಎನ್ನುವ ಆದೇಶವನ್ನು ಪೌರಾಯುಕ್ತ ಉಲ್ಲಂಸಿದ್ದಾರೆ ಎಂದು ದೂರಿದರು.
ಕೇವಲ ಗಾಂೀಜಿ ಭಾವಚಿತ್ರ ಇಟ್ಟು ಧ್ವಜಾರೋಹಣ ನಡೆಸಲಾಗಿದ್ದು, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ಅಗೌರವ ತೋರಿಸಲಾಗಿದೆ. ಕೂಡಲೇ ಪೌರಾಯುಕ್ತ ಗುರುಸಿದ್ಧಯ್ಯಸ್ವಾಮಿ ಹಾಗೂ ಸಂಬಂಸಿದ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.
ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ಹಿರಿಯ ಅಕಾರಿಗಳ ಸಭೆ ನಡೆಸಿ ಎಲ್ಲ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇಟ್ಟು ಗೌರವಿಸಲು ಆದೇಶ ಹೊರಡಿಸಬೇಕು. ಕಳೆದ ಜ.26ರಂದು ನ್ಯಾಯಾೀಶರ ವಿರುದ್ಧ ಹೋರಾಟ ಮಾಡಿದ ಹೋರಾಟಗಾರರ ಮೇಲೆ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಸಂಚಾಲಕ ಎಸ್.ಮಾರೆಪ್ಪ, ಪದಾಕಾರಿಗಳಾದ ರವೀಂದ್ರನಾಥ ಪಟ್ಟಿ, ಜೆ.ಬಿ.ರಾಜು, ಹೇಮರಾಜ ಅಸ್ಕಿಹಾಳ, ಎಂ.ಆರ್.ಭೇರಿ, ಜನಾರ್ದನ ಹಳ್ಳಿಬೆಂಚಿ, ಎಸ್.ರಾಜು, ಅನಿಲ್‌ಕುಮಾರ್, ರಾಘವೇಂದ್ರ ಬೋರಡ್ಡಿ, ರಾಜು ಪಟ್ಟಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net