

ಯಾದಗಿರಿ: ಇಲ್ಲಿನ ನಗರಸಭೆ ಅಧ್ಯP್ಷÀ ಮತ್ತು ಉಪಾಧ್ಯP್ಷÀ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ತಮ್ಮ, ತಮ್ಮ ನಾಯಕರನ್ನು ಭೇಟಿ ಮಾಡಿ, ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಅಧ್ಯP್ಷÀ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯP್ಷÀ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ಇಬ್ಬರು ಮಹಿಳೆಯರೇ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಗ್ಯಾರಂಟಿ. ನಗರಸಭೆಯಲ್ಲಿ ಒಟ್ಟು ೩೧ ಸದಸ್ಯರಿದ್ದು, ಇದರಲ್ಲಿ ೧೬ಬಿಜೆಪಿ, ೧೩ ಜನ ಕಾಂಗ್ರೆಸ್ ಸದಸ್ಯರು, ೨ ಜೆಡಿಎಸ್ ಹಾಗೂ ಒಬ್ಬರು ಮಾತ್ರ ಪಕ್ಷೇತರ ಸದಸ್ಯರಿದ್ದಾರೆ.
ಬಿಜೆಪಿ ಪರವಾಗಿ ಮತಹಾಕಲು ಇಬ್ಬರು ಎಂಎಲ್‌ಸಿಗಳಾದ ಬಿ.ಜಿ.ಪಾಟೀಲ್ ಮತ್ತು ಶಶೀಲ್ ನಮೋಶಿ ಅವರಿಗೆ ಅವಕಾಶವಿದೆ. ಇದರಿಂದ ಬಿಜೆಪಿಗೆ ೧೮ ಮತಗಳ ಬಲವಿದೆ. ಕಾಂಗ್ರೆಸ್ ಪರವಾಗಿ ಮತಹಾಕಲು ಸಂಸದ ಕುಮಾರ ನಾಯಕ್, ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ, ಚಂದ್ರಶೇಖರ ಪಾಟೀಲ್ ಅವರಗೆ ಅವಕಾಶವಿರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ೧೬ ಮತಗಳಿವೆ.
ಇನ್ನೂ ಸಾಮಾನ್ಯ ಸ್ಥಾನಕ್ಕೆ ಅಧ್ಯP್ಷÀರಾಗಲು ಬಿಜೆಪಿಯಲ್ಲಿ ಸಾಮಾನ್ಯ ವರ್ಗದ ಮಹಿಳಾ ಸದಸ್ಯರಿಲ್ಲ. ಹೀಗಾಗಿ ಇದ್ದ ಐದಾರು ಮಹಿಳಾ ಸದಸ್ಯರಲ್ಲಿ ಬೇರೆ, ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿಯೇ ಯಾರಾದರೊಬ್ಬರು ಅಧ್ಯP್ಷÀರಾಗಬಹುದು. ಆದರೆ ಕಾಂಗ್ರೆಸ್ ಪP್ಷÀದಲ್ಲಿ ಸಾಮಾನ್ಯ ವರ್ಗದ ಮಹಿಳಾ ಸದಸ್ಯರಿದ್ದರೂ ಅಧಿಕಾರ ಪಡೆಯಲು ಸಂಖ್ಯಾಬಲದ ಕೊರತೆ ಎದ್ದು ಕಾಡುತ್ತಿದೆ. ಹೀಗಾಗಿ ಜೆಡಿಎಸ್‌ನ ಇಬ್ಬರು ಹಾಗೂ ಓರ್ವ ಪಕ್ಷೇತರ ಸದಸ್ಯರಿಗೆ ಈ ಚುನಾವಣೆಯಲ್ಲಿ ಭಾರಿ ಡಿಮ್ಯಾಂಡ್ ಎಂದೇ ಹೇಳಬಹುದು.
ಕಾಂಗ್ರೆಸ್ ಪಕ್ಷದ ನಾಯಕರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರ ಬೆಂಬಲ ಪಡೆದರೆ ಅಧಿಕಾರದ ಗದ್ದುಗೆ ಹಿಡಿಯಬಹುದು. ಈ ನಿಟ್ಟಿನಲ್ಲಿ ಆಕಾಂಕ್ಷಿಗಳು ಮತ್ತು ಪಕ್ಷದ ಮುಖಂಡರು ಅಲ್ಲಲ್ಲಿ ಸೇರಿ ಹೇಗೆ ಮಾಡುವುದು ಎಂಬ ಚರ್ಚೆ ತೊಡಗಿಕೊಂಡಿದ್ದಾರೆ.