ನಗರಸಭಾ ತೆರಿಗೆ ಪಾವತಿಯಲ್ಲಿ ಶೇಕಡ ೫ ರಿಯಾಯಿತಿ

1 ckm 7
ಚಿಕ್ಕಮಗಳೂರಿನ ನಗರಸಭೆ ವ್ಯಾಪ್ತಿಯಲ್ಲಿ ನಿಗಧಿತ ಅವಧಿಗೂ ಮುನ್ನವೇ ಆಸ್ತಿ ತೆರಿಗೆ ಪಾವತಿ ಮಾಡಿದವರಿಗೆ ನಗರಸಭೆ ಸಿಬ್ಬಂದಿ ಗುಲಾಬಿ ಹೂವು ನೀಡಿ ಅಭಿನಂದಿಸಿದರು.
Published on

ಚಿಕ್ಕಮಗಳೂರು: ಚಿಕ್ಕಮಗಳೂರು ನಗರಸಭೆಯ ತೆರಿಗೆ ಪಾವತಿದಾರರಿಗೆ ಶೇ. ೫ರಷ್ಟು ರಿಯಾಯಿತಿಯನ್ನು ನೀಡಲಾಗಿದ್ದು, ನಿಗದಿತ ಅವಧಿಗೂ ಮುನ್ನ ತೆರಿಗೆ ಪಾವತಿ ಮಾಡಿದ ಪಾವತಿದಾರರಿಗೆ ಗುಲಾಬಿ ಹೂವು ನೀಡುವ ಮೂಲಕ ನಗರಸಭೆ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.

೨೦೨೫-೨೬ ನೇ ಸಾಲಿನ ಆಸ್ತಿ ತೆರಿಗೆಯನ್ನು ೨೦೨೫ನೇ ಏಪ್ರಿಲ್ ತಿಂಗಳ ೩೦ನೆ ತಾರೀಖಿನೊಳಗೆ ಪಾವತಿಸಿದಲ್ಲಿ ಶೇಕಡ ೫ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ನಂತರದ ಪಾವತಿಗೆ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಈ ವೇಳೆ ತಿಳಿಸಿದರು.

ಮೇ ತಿಂಗಳಲ್ಲೇ ಯಾವುದೇ ರಿಯಾಯಿತಿ ಮತ್ತು ದಂಡ ವಿರುವುದಿಲ್ಲ. ಆದರೆ ಜೂನ್ ತಿಂಗಳ ನಂತರದ ಆಸ್ತಿ ತೆರಿಗೆ ಪಾವತಿಗೆ ಪ್ರತಿ ತಿಂಗಳು ಶೇ. ಎರಡರಷ್ಟು ದಂಡವನ್ನು ವಿಧಿಸಲಾಗುವುದು ಎಂದು ತಿಳಿಸಿದರು.

ಈ ರಿಯಾಯಿತಿ ಆಂದೋಲನವನ್ನು ಪ್ರೋತ್ಸಾಹಿಸುವ ಸಲುವಾಗಿ ತೆರಿಗೆ ಪಾವತಿ ದಾರರಿಗೆ ಗುಲಾಬಿ ಹೂವನ್ನು ನೀಡಿ ಅಭಿನಂದಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತೆರಿಗೆ ಪಾವತಿಗೆ ಎಲ್ಲಾ ರೀತಿಯ ಆನ್ಲೆÊನ್ ಪಾವತಿಯ ಸೌಲಭ್ಯವನ್ನು ಒದಗಿಸಲಾಗಿದೆ. ಅಲ್ಲದೆ ಆಸ್ತಿ ತೆರಿಗೆಯನ್ನು ಮತ್ತು ನಗರಸಭೆಯ ಇತರ ಶುಲ್ಕಗಳನ್ನು ನಗರಸಭೆ ಆವರಣದಲ್ಲಿರುವ ಬ್ಯಾಂಕಿನಲ್ಲಿಯೇ ಅಥವಾ ಯಾವುದೇ ಅನ್ಯ ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ಪಾವತಿಸಬಹುದಾಗಿದೆ. ಸಾರ್ವಜನಿಕರು ಈ ವ್ಯವಸ್ಥೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ರವಿ ಎಸ್ ಆರ್, ಕಂದಾಯ ಅಧಿಕಾರಿ ದೀಪಕ್ ಎಂ., ಪ್ರಥಮ ದರ್ಜೆ ಸಹಾಯಕ ಚಂದ್ರಶೇಖರ್.ಸಿ.ಜಿ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net