ನಗರಪಾಲಿಕೆ ಮಾಜಿ ಸದಸ್ಯ ನಾರಾಯಣಪ್ಪ ನಿಧನ

Narayanappa (nidana)
Published on

ಮೈಸೂರು: ನಗರಪಾಲಿಕೆ ಮಾಜಿ ಸದಸ್ಯ ಎಂ.ನಾರಾಯಣಪ್ಪ (80) ಅವರು ಹೃದಯಾಘಾತದಿಂದ ಭಾನುವಾರ ನಿಧನರಾದರು.
ಬಿಜೆಪಿಯಿಂದ ಎರಡು ಬಾರಿ ನಗರಪಾಲಿಕೆ ಸದಸ್ಯರಾಗಿದ್ದಲ್ಲದೇ ವೀರನಗೆರೆ ನಾಯಕ ಸಂಘದ ಅಧ್ಯಕ್ಷರಾಗಿ, ಮೈಸೂರು ಜಿಲ್ಲಾ ನಾಯಕ ಸಂಘದ ಖಜಾಂಚಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಗಾಯತ್ರಿ ಫ್ಲವರ್ ಸ್ಟಾಲ್ (ಜಿಎಫ್‌ಎಸ್) ಮೂಲಕ ಹೆಸರಾಗಿದ್ದಲ್ಲದೇ ದಸರಾ ಅಂಬಾರಿಗೆ ಪ್ರತಿ ವರ್ಷ ಹೂವಿನ ಅಲಂಕಾರ ನೆರವೇರಿಸುವ ಕಾರ್ಯ ಮಾಡುತ್ತಿದ್ದರು. ನಾರಾಯಣಪ್ಪ ಅವರಿಗೆ ಪತ್ನಿ, ಏಳು ಜನ ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.
ವಿಜಯನಗರ ಒಂದನೇ ಹಂತದಲ್ಲಿರುವ ದಿವ್ಯರೂಪ ಕಲ್ಯಾಣ ಮಂಟಪದ ಬಳಿ ಇರುವ ಮನೆಯಲ್ಲಿ ಸೋಮವಾರ ಬೆಳಗ್ಗೆ 11 ಗಂಟೆ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಎನ್.ಆರ್.ಮೊಹಲ್ಲಾದಲ್ಲಿರುವ ಸ್ಮಶಾನದಲ್ಲಿ ಅಂತ್ಯ ಕ್ರಿಯೆ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net