ನಗರದಲ್ಲಿರುವ ಪೊಲೀಸ್ ಸಂಕೀರ್ಣದಿಂದ ಜಿಗಿದು ಯುವಕ ಸಾವು

ನಗರದಲ್ಲಿರುವ ಪೊಲೀಸ್ ಸಂಕೀರ್ಣದಿಂದ ಜಿಗಿದು ಯುವಕ ಸಾವು
Published on

ಹಾಸನ: ನಗರದ ಎನ್.ಆರ್.ವೃತ್ತದಲ್ಲಿರುವ ಪೊಲೀಸ್ ಸಂಕೀರ್ಣದ ನಾಲ್ಕನೇ ಮಹಡಿಯಿಂದ ಯುವಕ ಜಿಗಿದು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಹೊಳೆನರಸೀಪುರ ತಾಲೂಕು ಮಲ್ಲೇನಹಳ್ಳಿ ಗ್ರಾಮದ ರಾಜು ಹಾಗು ಆರತಿ ಎಂಬುವವರ ಪುತ್ರ ಸುನೀಲ್ (30) ಮೃತ ದುರ್ದೈವಿ ಈತ ಶುಕ್ರವಾರ ರಾತ್ರಿಯೂ ಎನ್.ಆರ್.ವೃತ್ತದಲ್ಲಿ ಸುತ್ತಾಡಿಕೊಂಡಿದ್ದ. ಶನಿವಾರ ಪೊಲೀಸ್ ಉಪಾಧೀಕ್ಷಕರ ಕಚೇರಿ ಸಂಕಿರ್ಣದಲ್ಲಿರುವ ನಗರ ಠಾಣೆ, ಗ್ರಾಮಾಂತರ ಪೊಲೀಸ್ ಠಾಣೆ, ಸಿಇಎನ್ ಪೊಲೀಸ್ ಠಾಣೆ, ಡಿವೈಎಸ್‌ಪಿ ಕಚೇರಿ ಕಡೆಗೆಲ್ಲಾ ಸುಮನೆ ಸುತ್ತಾಡಿದ್ದಾನೆ. ನಂತರ ನಾಲ್ಕನೇ ಮಹಡಿಗೆ ಏರಿ ಅಲ್ಲಿಂದ ಕೆಳಗೆ ಹಾರಿದ್ದಾನೆ. ತಲೆಗೆ ಬಲವಾದ ಏಟು ಬಿದ್ದ ಹಿನ್ನಲೇ ತಕ್ಷಣವೇ ಹಿಮ್ಸ್ ಆಸ್ಪತ್ರೆಗೆೆ ಕರೆ ತರಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮೊಹಮದ್ ಸುಜೀತಾ, ಡಿವೈಎಸ್‌ಪಿ ಮುರುಳಿಧರ ಹಾಗು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸ್ ಠಾಣೆಯ ಸಿಸಿಟಿವಿ ಕ್ಯಾಮರಾದಲ್ಲಿ ಯುವಕ ಮೇಲಿಂದ ಹಾರಿರುವ ವಿಡಿಯೊ ಸೆರೆಯಾಗಿದೆ ಎನ್ನಲಾಗಿದೆ.

ಮದ್ಯ ವ್ಯಸನಿ ಸುನೀಲ್:
ಮೃತ ಸುನೀಲ್ ಇತ್ತೀಚೆಗೆ ವಿಪರೀತ ಮದ್ಯ ವ್ಯಸನಿಯಾಗಿದ್ದ ಎಂದು ತಿಳಿದುಬಂದಿದೆ. ಒಂಬತ್ತನೇ ತರಗತಿ ವರೆಗೆ ವ್ಯಾಸಂಗ ಮಾಡಿದ್ದ ಈತ ಹೊಳೆನರಸೀಪುರದ ಮಾಂಸದಂಗಡಿವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಅವಿವಾಹಿತ ಆಗಿದ್ದ ಈತ ಮನೆಗೆ ಅಪರೂಪಕ್ಕೊಮೆ ಹೋಗುತ್ತಿದ್ದ. ಕುಟುಂಬಸ್ಥರೊಂದಿಗಿನ ಬಾಂಧವ್ಯವೂ ಅಷ್ಟಕ್ಕಷ್ಟೆ ಇತ್ತು. ಒಂದು ವಾರದಿಂದ ಮನೆಗೆ ಹೋಗಿರಲಿಲ್ಲ ಹಾಗು ಫೋನ್‌ನಲ್ಲಿಯೂ ಮಾತಾಡಿರಲಿಲ್ಲ. ಅಂಗಡಿಯಲ್ಲೇ ಕೆಲಸ ಮಾಡಿಕೊಂಡಿರಬೇಕೆಂದು ಪಾಲಕರು ಸಹ ಸುನೀಲ್ ಕಡೆಗೆ ಗಮನ ಹರಿಸಿರಲಿಲ್ಲ. ಸುನೀಲ್ ವಿರುದ್ಧ ಯಾವ ಪೊಲೀಸ್ ದೂರು ಇರಲಿಲ್ಲ ಹಾಗು ಆತನು ಸಹ ದೂರು ನೀಡಲು ಬಂದಿರಲಿಲ್ಲ. ಏಕಾಏಕಿ ಠಾಣೆ ಮೇಲೇರಿ ಆತಹತ್ಯೆ ಮಾಡಿಕೊಂಡಿದ್ದು ಪೊಲೀಸರಲ್ಲೂ ಆಶ್ಚರ್ಯ ಹುಟ್ಟಿಸಿದೆ. ಹಿಮ್ಸ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net