ನಗರದಲ್ಲಿ ಹೃದಯಾಘಾತಕ್ಕೆ ಯುವಕ ಬಲಿ

Darshan
Published on

ಚಾಮರಾಜನಗರ: ಆರೋಗ್ಯವಂತ ಯುವಕರು ಚಿಕ್ಕವಯಸ್ಸಿನಲ್ಲೇ ಹೃದಯಾಘಾತದಿಂದ ಮೃತಪಡುವುದು ಇತ್ತೀಚೆಗೆ ಹೆಚ್ಚು ವರದಿಯಾಗುತ್ತಿದ್ದು, ಶುಕ್ರವಾರ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಕೆಎಚ್‌ಬಿ ಬಡಾವಣೆಯ ನಿವಾಸಿ ದರ್ಶನ್(22) ಹೃದಯಘಾತದಿಂದ ಮುಂಜಾನೆ ಮೃತಪಟ್ಟರು. ಇತ್ತೀಚೆಗೆ ಡಿಪ್ಲೋಮೋ ಪೂರೈಸಿದ್ದ ಇವರು, ಪಾರ್ಟ್‌ಟೈಂ ಕೆಲಸವನ್ನು ಮಾಡುತ್ತಿದ್ದರು. ಗುರುವಾರ ರಾತ್ರಿ ಶೀತ ಮತ್ತು ಗಂಟಲು ಸಮಸ್ಯೆಯಿಂದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಬಂದಿದ್ದರು. ಸುಮಾರು 2 ಗಂಟೆ ಸಮಯದಲ್ಲಿ ಕುಸಿದು ಬಿದ್ದಿದ್ದು, ಗಾಬರಿಗೊಂಡ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ಹೋಗವ ಅಷ್ಟರಲ್ಲಿ ಹೃದಯಾಘಾತದಿಂದ ಅಸುನೀಗಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net