ನಗರದಲ್ಲಿ ಹುಂಡೈ ಹಳೇ ಕಾರುಗಳ ಮೇಳ

24 (1)
Published on

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದ ಬಳಿ ಇರುವ ಅರಸು ಬೋರ್ಡಿಂಗ್‌ನಲ್ಲಿ ಮೂರು ದಿನಗಳ ಕಾಲ ಹುಂಡೈ ಮೆಗಾ ಎಕ್ಸ್‌ಚೇಂಚ್ ಮತ್ತು ಹಳೇ ಕಾರುಗಳ ಮೇಳ ಆಯೋಜಿಸಲಾಗಿತ್ತು.


ಮೇಳದಲ್ಲಿ ವಿವಿಧ ಕಾರುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಜತೆಗೆ, ಗ್ರಾಹಕರಿಗೆ ಟೆಸ್ಟ್ ಡ್ರೈವಿಂಗ್ ಅವಕಾಶವನ್ನೂ ಕಲ್ಪಿಸಿಕೊಡಲಾಗಿತ್ತು. ಹುಂಡೈ ಕರ್ನಾಟಕದ ಮಾರ್ಕೆಟಿಂಗ್ ಮ್ಯಾನೇಜರ್ ಬೆನೆಟ್ ಮೇಳವನ್ನು ಉದ್ಘಾಟಿಸಿದರು.

ಅದ್ವೈತ್ ಹುಂಡೈ ಸೇಲ್ಸ್ ಮುಖ್ಯಸ್ಥ ಕೆ.ಸಿ.ಪ್ರಮೋದ್, ಸ್ಟಾರ್ ಹುಂಡೈ ಸೇಲ್ಸ್ ಮುಖ್ಯಸ್ಥ ಎಂ.ಬಿ.ನಾಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net