ನಗರದಲ್ಲಿ ಸಿಎಂ ಸ್ವಾಭಿಮಾನಿ ಸಮಾವೇಶ:ಸಿದ್ಧತೆ ಪರಿಶೀಲಿಸಿದ ಐಜಿಪಿ

ನಗರದಲ್ಲಿ ಸಿಎಂ ಸ್ವಾಭಿಮಾನಿ ಸಮಾವೇಶ:ಸಿದ್ಧತೆ ಪರಿಶೀಲಿಸಿದ ಐಜಿಪಿ
Published on

 ಹಾಸನ: ಡಿ.5 ರಂದು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನಕ್ಕೆ ಈಗಾಗಲೇ ಪೂರ್ವ ಸಿದ್ಧತೆ ಶುರುವಾಗಿದೆ.ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಗುರುವಾರ ಖುದ್ದು ಸ್ಥಳ ಪರಿಶೀಲನೆ ನಡೆಸಿದರು.

ಬಂದೋಬಸ್ತ್‌ಗಾಗಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂದು ಅವಲೋಕನ ನಡೆಸಿದರು. ಈ ವೇಳೆ ಎಸ್ಪಿ ಮೊಹಮದ್ ಸುಜೀತಾ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು. ಒಟ್ಟು ಆರು ಜಿಲ್ಲೆಗಳಿಂದ ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆ ಇರುವುದರಿಂದ ಪಾರ್ಕಿಂಗ್ ವ್ಯವಸ್ಥೆ, ಗಣ್ಯರ ಆಗಮನಕ್ಕೆ ಪ್ರತ್ಯೇಕ ಮಾರ್ಗ, ಸುಗಮ ಸಂಚಾರಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿದರು.

ನಗರದಲ್ಲಿ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕೆಲ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಇತರೆ ಸಚಿವರು ಸ್ಥಳ ಪರಿಶೀಲನೆ ನಡೆಸಿ, ಸಮಾವೇಶದ ಉದ್ದೇಶ ಏನು, ಏಕೆ ಎಂದು ಹೇಳಿ ಹೋಗಿದ್ದರು.ಅದಾದ ಬಳಿಕ ಸಮಾವೇಶಕ್ಕೆ ತಯಾರಿ ಶುರುವಾಗಿದೆ. ಅರಸೀಕೆರೆ ರಸ್ತೆ ಕೃಷ್ಣನಗರದ ಕೆಎಸ್‌ಸಿಎಗೆ ಮೀಸಲಾದ ವಿಶಾಲ ಮೈದಾನದಲ್ಲಿ ಸಮಾವೇಶ ನಡೆಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಜೆಸಿಬಿಗಳು ನೆಲ ಸಮತಟ್ಟು ಮಾಡುವ ಕಾರ್ಯದಲ್ಲಿ ನಿರತವಾಗಿದ್ದರೆ, ಜರ್ಮನ್ ಟೆಂಟ್ ಬಳಸಿ ಬೃಹತ್ ಸಭಾಂಗಣ ಮತ್ತು ವೇದಿಕೆ ನಿರ್ಮಾಣ ಕೆಲಸ ಭರದಿಂದ ಸಾಗಿದೆ.ಅಂದಿನ ಸಮಾವೇಶದಲ್ಲಿ ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು ಸೇರಿ ಆರು ಜಿಲ್ಲೆಯಿಂದ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿಯನ್ನು ಕರೆ ತರಲು ಸಂಘಟಕರು ಯೋಜನೆ ಹಾಕಿಕೊಂಡಿದ್ದಾರೆ. ಲಕ್ಷಾಂತರ ಮಂದಿ ಆಗಮಿಸುವುದ್ದರಿಂದ ಅಕಸ್ಮಾತ್ ಮಳೆ ಬಂದರೆ ಅಥವಾ ಬಿಸಿಲುನ ರಕ್ಷಣೆಗಾಗಿ ಜರ್ಮನ್ ಟೆಂಟನ್ನೇ ಹಾಕಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net