ನಗರದಲ್ಲಿ ಮತ್ತೊಂದು ಕರೊನಾ ಪ್ರಕರಣ

B SHARAT DC Photo
Published on

ಕಲಬುರಗಿ: ಜಿಲ್ಲೆಯಲ್ಲಿ ಗುರುವಾರ ಮತ್ತೊಂದು ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 36ಕ್ಕೆ ಏರಿದಂತಾಗಿದೆ.
ರಾಜ್ಯದಲ್ಲಿ ಬೆಳಗ್ಗೆ 16 ಪ್ರಕರಣ ಪತ್ತೆಯಾದಾಗ ಕಲಬುರಗಿಯ ಒಂದೇ ಒಂದು ಕೇಸ್ ಇರಲಿಲ್ಲ. ಆದರೆ ಸಂಜೆ ಬುಲೆಟಿನ್ನಲ್ಲಿ ದೃಢಪಟ್ಟ ಎರಡು ಪಾಸಿಟಿವ್ ಕೇಸ್ಗಳಲ್ಲಿ ಜಿಲ್ಲೆಯದ್ದೂ ಒಂದು ಪ್ರಕರಣ ಸೇರಿದ್ದು, ಯಥಾವತ್ ಆತಂಕ ಮುಂದುವರಿದಿದೆ.
ಸೋಂಕಿತ ಉಮರ್ ಕಾಲನಿ ನಿವಾಸಿ 32 ವರ್ಷದ ವ್ಯಕ್ತಿ (ಪಿ445) ಇಎಸ್ಐ ಐಸೋಲೇಷನ್ ವಾಡರ್್ನಲ್ಲಿರುವ 61 ವರ್ಷದ (ಪಿ413) ವೃದ್ಧನ ಅಳಿಯ. ವೃದ್ಧನಿಗೆ ಅದ್ಹೇಗೆ ಸೋಂಕು ತಗುಲಿತು ಎನ್ನುವಷ್ಟರಲ್ಲಿ ಆತನ ಅಳಿಯನಿಗೂ ಸೋಂಕು ದೃಢಪಟ್ಟಿರುವುದು ಕುಟುಂಬದಲ್ಲಿ ಭಯ ಮೂಡಿಸಿದೆ. ಈತನನ್ನೂ ಇಎಸ್ಐ ಐಸೋಲೇಷನ್ ವಾರ್ಡಗೆ ಸೇರಿಸಲಾಗಿದೆ. ಈತನಿಗೆ 16 ಜನ ಮೊದಲ ಹಂತದ ನೇರ ಸಂಪರ್ಕಕ್ಕೆ ಬಂದಿದ್ದು, ಇವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಎರಡನೇ ಹತಂದ ಕಾಂಟ್ಯಾಕ್ಟ ಪತ್ತೆ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಈ ಮಧ್ಯೆ ಇನ್ನೂ 779 ಪರೀಕ್ಷಾ ವರದಿ ನಿರೀಕ್ಷೆಯಲ್ಲಿದೆ. ಇಲ್ಲಿಯವರೆಗೆ ಪರೀಕ್ಷೆಗೊಳಗಾದವರ ಪೈಕಿ 1660 ಜನರಿಗೆ ಕರೊನಾ ಸೋಂಕು ಇಲ್ಲವೆಂದು ಹೇಳಲಾಗಿದೆ.
981 ಜನ 28 ದಿನದ ಹೋಂ ಕ್ವಾರಂಟೈನ್ ಪೂರೈಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 2474 ಶಂಕಿತರ ರಕ್ತ, ಗಂಟಲು ದ್ರವ ಟೆಸ್ಟ್ಗೆ ಕಳುಹಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 19 ಕಂಟೈನ್ಮೆಂಟ್ ಜೋನ್ಗಳಲ್ಲಿ 37533 ಮನೆಗಳ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಶರತ್ ಬಿ. ತಿಳಿಸಿದ್ದಾರೆ.
ಪ್ರೈಮರಿ ಕಾಂಟ್ಯಾಕ್ಟ್ಸ್ 578, ಸೆಕೆಂಡರಿ ಕಾಂಟ್ಯಾಕ್ಟ್ಸ್ 2000, ವಿದೇಶದಿಂದ ಬಂದ 488 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 1612 ಜನರನ್ನು ಇರಿಸಲಾಗಿದೆ. 14 ದಿನದ ಹೋಂ ಕ್ವಾರಂಟೈನ್ ಮುಗಿಸಿದ 331 ಜನರನ್ನು ಮುಕ್ತಗೊಳಿಸಲಾಗಿದೆ. 244 ಜನರನ್ನು ಇಎಸ್ಐಸಿ ಐಸೋಲೇಷನ್ ವಾರ್ಡನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net