ನಗರದಲ್ಲಿ ತುಂತುರು ಮಳೆ

Published on

ಬಳ್ಳಾರಿ : ನಗರದಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತವರಣದಿಂದ ಕೂಡಿದ ಪರಿಣಾಮ ಸೋಮವಾರ ಮಧ್ಯಾಹ್ನ ಹಾಗೂ ಸಂಜೆ ಕೆಲ ಕಾಲ ತುಂತುರು ಮಳೆ ಸುರಿಯಿತು. ವಾಹನ ಸವಾರರು ಹಾಗೂ ಸಾರ್ವಜನಿಕರು ಮಳೆ ನೀರಿನಲ್ಲಿ ನೆನೆಯುತ್ತಾ ತಮ್ಮ ಕಚೇರಿಗಳಿಗೆ ತೆರಳಿದರು. ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರು ತಲೆಯ ಬ್ಯಾಗ್ ಹೊತ್ತು ಸಂಚರಿಸಿದರು. ಇಲ್ಲಿನ ಸುಧಾ ಕ್ರಾಸ್, ದುರ್ಗಮ್ಮ ಗುಡಿ, ರಾಯಲ್ ವೃತ್ತದಲ್ಲಿ ಮಳೆ ಸುರಿದ್ದರಿಂದ ಕೆಲ ಟ್ರಾಫಿಕ್ ಸಮಸ್ಯೆಯಾಯಿತು. ಗ್ರಾಮೀಣ ಭಾಗದಲ್ಲಿ ಯೂ ಮಳೆ ಸುರಿದ ಪರಿಣಾಮ ಕೃಷಿ ಚಟುವಟಿಕೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net