ಬಳ್ಳಾರಿ : ಇತ್ತೀಚೆಗೆ ರಾಜ್ಯ ಸರ್ಕಾರ ಪ್ರತಿ ಹಾಲಿನ ಲೀಟರ್‌ಗೆ ಎರಡು ರೂ. ದರ ಏರಿಕೆ ಮಾಡುವುದಾಗಿ ಆದೇಶಿಸಿತ್ತು. ಅದರಂತೆ, ಜಿಲ್ಲೆಯಲ್ಲಿ ಹಾಲಿನ ದರದ ಹೆಚ್ಚಳದಿಂದ ಟೀ ದರದ ಬೆಲೆಯು ಹೆಚ್ಚಳವಾಗಿದೆ. ನಗರದ ಬೆಂಗಳೂರು ರಸ್ತೆಯ ಟೀ ಹೋಟೆಲ್‌ವೊಂದರಲ್ಲಿ ಒಂದು ಟೀ ಬೆಲೆಗೆ ಏಕಾಏಕಿ ನಾಲ್ಕು ರೂಪಾಯಿ ಹೆಚ್ಚಿಸಿದೆ. ಮೊದಲು ಇದ್ದ ಬೆಲೆ ಎಂಟು ರೂ. ಈಗ ಹನ್ನರೆಡು ರೂ. ಗೆ ಹೆಚ್ಚಿಸಲಾಗಿದೆ. ಇದರ ಬಗ್ಗೆ ಸಾರ್ವಜನಿಕರು ಹೋಟೆಲ್ ಮಾಲೀಕರನ್ನು ಪ್ರಶ್ನಿಸಿದರೆ ಸರ್ಕಾರ ಏರಿಕೆ ಮಾಡಿರುವುದು ಎರಡು ರೂ. ಮಾತ್ರ. ಆದರೆ, ವಿತರಕರು ಹಾಗೂ ಹಾಲು ಮಾರಾಟಗಾರರು ಕೂಡ ಎರಡು ರೂ. ಹೆಚ್ಚಿಸಿದ್ದು ಏಕಾಏಕಿ ಲೀಟರ್ ಹಾಲಿಗೆ ನಾಲ್ಕು ರೂ. ಹೆಚ್ಚಾಗಿದೆ. ಸರ್ಕಾರ ಐವತ್ತು ಎಂಎಲ್ ಹಾಲು ಹೆಚ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಲೀಟರ್ ಹಾಲಿನ ಪ್ಯಾಕೆಟ್ ಅಳತೆ ಮಾಡಿದರೆ ಐವತ್ತು ಎಂಎಲ್ ಹೆಚ್ಚಿನ ಹಾಲು ಸಿಗುತ್ತಿಲ್ಲ ಎಂದು ಹೋಟೆಲ್ ಮಾಲೀಕರು ದೂರಿದರು.