ನಗರದಲ್ಲಿ ಜಿಟಿಜಿಟಿ ಮಳೆ

Published on

ಚಾಮರಾಜನಗರ: ಉತ್ತರ ಒಳನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ನಗರದಲ್ಲೂ ಭಾನುವಾರ ಜಿಟಿಜಿಟಿ ಮಳೆ ಸುರಿಯಿತು.

ನಗರದ ಬಿ.ರಾಚಯ್ಯ ಜೋಡಿ ರಸ್ತೆ, ದೊಡ್ಡಂಗಡಿ, ಚಿಕ್ಕಂಗಡಿಬೀದಿ, ಡಿವಿಯೇಷನ್ ರಸ್ತೆ ಹಾಗೂ ಇನ್ನಿತರೆ ಪ್ರಮುಖ ರಸ್ತೆಗಳಲ್ಲಿ ಆಗಾಗ ಸುರಿಯುತ್ತಿದ್ದ ಜಿಟಿಜಿಟಿ ಮಳೆಗೆ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು. ಕೆಲವು ವೇಳೆ ನಿಲ್ಲುತ್ತಿದ್ದ ಮಳೆ, ಮತ್ತೊಮ್ಮೆ ಬರುತ್ತಿದ್ದರಿಂದ ಬೀದಿಬದಿ ಹಾಗೂ ಇನ್ನಿತರೆ ವ್ಯಾಪಾರಿಗಳಿಗೆ ಸಮಸ್ಯೆಯಾಯಿತು.

ಶನಿವಾರ ಸುರಿದಿದ್ದ ಮಳೆಯಿಂದ ಅಧ್ವಾನವಾಗಿದ್ದ ಮಣ್ಣಿನ ರಸ್ತೆಗಳಲ್ಲಿ ಆಗಾಗ ಸುರಿಯುತ್ತಿದ್ದ ಮಳೆಗೆ ವಾಹನ ಸವಾರರು ಸಂಚರಿಸಲು ಪರದಾಡಿದರು. ದಿನವಿಡೀ ಮೋಡಕವಿದ ವಾತಾವರಣ ಇದ್ದ ಪರಿಣಾಮ, ರಸ್ತೆಗಳಲ್ಲಿ ಸಾರ್ವಜನಿಕರ ಓಡಾಟ ವಿರಳವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net