ನಗರದಲ್ಲಿ ಜ.12 ರಂದು ಎಲೈಟ್ ಪುರಸ್ಕಾರ ಸಮಾರಂಭ

ನಗರದಲ್ಲಿ ಜ.12 ರಂದು ಎಲೈಟ್ ಪುರಸ್ಕಾರ ಸಮಾರಂಭ
Published on

ಹಾಸನ:

ನಗರದ ಕೆಸಿಪಿ ವಿದ್ಯಾಸಂಸ್ಥೆ ಎಲೈಟ್ ಸ್ಕೂಲ್ ವತಿಯಿಂದ ಜ. 12ರಂದು ಎಲೈಟ್ ಪುರಸ್ಕಾರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಆಡಳಿತಾಧಿಕಾರಿ ಕೆ.ಎಂ. ನಾಗರಾಜ್ ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಅಂದು ಸಂಜೆ 3:30ಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಗೌರವ ಅತಿಥಿಗಳಾಗಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭಾಗವಹಿಸಲಿದ್ದಾರೆ. ಖ್ಯಾತ ಬರಹಗಾರ ಚಾತನಹಳ್ಳಿ ಮಹೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಎಲೈಟ್ ಸ್ಕೂಲ್‌ನ ಸ್ಥಾಪಕರಾದ ಕೆ.ಟಿ. ಪುಟ್ಟಸ್ವಾಮಿಗೌಡ ಅತಿಥಿ ಯಾಗಿ ಭಾಗವಹಿಸುವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಸಕ್ತ ವರ್ಷದಲ್ಲಿ ನಮ್ಮ ಶಾಲೆಯ ವತಿಯಿಂದ ವಿಶೇಷವಾಗಿ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಪೋಷಕರಿಗೆ 2 ಲಕ್ಷ ವರೆಗೆ ವಿಮೆಯನ್ನು ಉಚಿತವಾಗಿ ನೋಂದಣಿ ಮಾಡಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗೆ ಹಾಗೂ ಪೋಷಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು 1000 ಗಿಡ ವಿತರಿಸುವ ಕಾರ್ಯಕ್ರಮ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರನ್ನು ಕರೆಸಿ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ. ಜೊತೆಗೆ ಶಾಲಾ ಮಕ್ಕಳಲ್ಲಿ ಪತ್ರಿಕೆ ಬಗ್ಗೆ ಜಾಗೃತಿ, ಓದುವ ಸಂಸ್ಕೃತಿ ಹೆಚ್ಚಿಸುವುದು, ಅದರ ಕಾರ್ಯವೈಖರಿ ಪರಿಚಯಿಸಲು ಎಲೈಟ್ ನ್ಯೂಸ್ ಹೆಸರಿನ ವಾರ್ಷಿಕ ಪತ್ರಿಕೆ ತರಲಾಗುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಶಾಲೆ ಪ್ರಾಂಶುಪಾಲರಾದ ಕ್ರಿಸ್ಟಿನಾ, ಆಡಳಿತ ಮಂಡಳಿಯ ತಿಮ್ಮಶೆಟ್ಟಿ, ಮಂಜುನಾಥ್, ನಾಗೇಶ್, ಮಹೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net