ನಗರದಲ್ಲಿ ಗಾಯತ್ರಿ ಮಹಾಯಜ್ಞ ಸಂಪನ್ನ

02_04_Mdy_03(Gaythri Yagna)
ಮಂಡ್ಯ ನಗರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಗಾಯತ್ರಿ ಮಹಾಯಜ್ಞ ನಡೆಯಿತು.
Published on

ಮಂಡ್ಯ: ಲೋಕ ಕಲ್ಯಾಣಾರ್ಥವಾಗಿ ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ನಗರದ ಗಾಯತ್ರಿ ಸಭಾಂಗಣದಲ್ಲಿ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಭಾನುವಾರ ಗಾಯತ್ರಿ ಮಹಾಯಜ್ಞ ನಡೆಯಿತು.
ಮೂರು ತಿಂಗಳಿಂದ ದಶಲಕ್ಷ ಗಾಯತ್ರಿ ಜಪಗಳು ನಡೆದಿದ್ದು, ಹೋಮ ಹವನ ನೆರವೇರಿಸಲಾಯಿತು. ಮಹಾಗಣಪತಿ ಹೋಮ, ಕಳಸ ಸ್ಥಾಪನೆ, 108 ಮುತ್ತೈದೆಯರಿಂದ ಗಾಯತ್ರಿ ಸಹಸ್ರನಾಮ ಪೂಜೆ ಮತ್ತು ಅಷ್ಟಾವಧಾನ, ಸೇವಾ, ಶಾಂತಿ ನಡೆಯಿತು. ಮೂರು ದಿನಗಳಿಂದ ನಡೆಯುತ್ತಿರುವ ಹೋಮದಲ್ಲಿ ಮೊದಲನೇ ದಿನ ಗಂಗಾ ಪೂಜೆ, ಎರಡನೇ ದಿನ ಸಹಸ್ರ ಮೋದಕ ಹೋಮ, 150 ಸುಮಂಗಲಿಯರಿಂದ ವಿಶೇಷ ಗಾಯತ್ರಿ ಜಪ ನಡೆಸಲಾಯಿತು. ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಡಾ.ಭಾನುಪ್ರಕಾಶ್ ಶರ್ಮಾ ಮಾತನಾಡಿ, ಅವಧೂತ ಅರ್ಜುನ್ ಗುರೂಜಿ ಅವರ ನೇತೃತ್ವದಲ್ಲಿ 25 ಯಜ್ಞ ಕುಂಡಗಳನ್ನು ನಿರ್ಮಿಸಿ ಪ್ರತಿ ಕುಂಡದಲ್ಲೂ 25 ಜನ ಋತ್ವಿಕರಿಂದ ವಿಶೇಷವಾಗಿ ಲಕ್ಷ ಗಾಯತ್ರಿ ಜಪದೊಂದಿಗೆ ಹೋಮವನ್ನು ಲೋಕ ಕಲ್ಯಾಣಾರ್ಥವಾಗಿ ನಡೆಸಲಾಯಿತು. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿಯೊಂದಿಗೆ ಹೋಮವನ್ನು ಸಂಪನ್ನಗೊಳಿಸಲಾಯಿತು. ಸಹಸಾರು ಜನ ಭಕ್ತರು ಪಾಲ್ಗೊಂಡು ಪುನೀತರಾದರು ಎಂದರು.
ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಎನ್.ಶಂಕರನಾರಾಯಣಶಾಸ್ತ್ರಿ, ಗೌರವಾಧ್ಯಕ್ಷ ಬೆಳ್ಳೂರು ಎಸ್.ಶಿವರಾಂ, ಉಪಾಧ್ಯಕ್ಷ ಬಿ.ಪಿ.ಮಧುಸೂದನ್, ಕಾರ್ಯದರ್ಶಿ ಕೆ.ಪ್ರಭಾಕರ್, ಸಹ ಕಾರ್ಯದರ್ಶಿ ಗೋಪಾಲಕೃಷ್ಣ ಶೆಣೈ, ಖಜಾಂಚಿ ವಿಜಯಲಕ್ಷ್ಮೀ, ಮುಖಂಡರಾದ ಟಿ.ಸದಾಶಿವಭಟ್, ಎಚ್.ಎಸ್.ನರಸಿಂಹಮೂರ್ತಿ, ಮಮತಾ ರಮೇಶ್, ಉಪೇಂದ್ರಶರ್ಮಾ, ಉಮಾ ದೊರೆಸ್ವಾಮಿ, ಬೆಳ್ಳೂರು ಎಸ್. ಶ್ರೀಧರ್, ಎಚ್.ಜೆ.ಉಪೇಂದ್ರಶರ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net