ನಗರದಲ್ಲಿ ಖಾಸಗಿ ಬಸ್ ಕಳ್ಳತನ

Published on

ಚಾಮರಾಜನಗರ: ನಗರದ ಎಲ್‌ಐಸಿ ಕಚೇರಿ ಬಳಿ ನಿಲ್ಲಿಸಿದ್ದ ಖಾಸಗಿ ಬಸ್ ಮಂಗಳವಾರ ಮುಂಜಾನೆ ಕಳವಾಗಿದೆ.

ಸೋಮವಾರ ರಾತ್ರಿ ಬಸ್ ಅನ್ನು ಎಲ್‌ಐಸಿ ಕಚೇರಿ ಬಳಿ ನಿಲ್ಲಿಸಿ ತೆರಳಿದ್ದಾರೆ. ಇದನ್ನು ಗಮನಿಸಿದ್ದ ಖದೀಮರು ಮುಂಜಾನೆ 3 ಗಂಟೆ ಸಮಯದಲ್ಲಿ ವಜ್ರ ಸಂಸ್ಥೆಯ ಖಾಸಗಿ ಬಸ್ ಅನ್ನು ಕಳವು ಮಾಡಿದ್ದಾರೆ. ಬಸ್ ಅನ್ನು ಓಡಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಬಸ್‌ನ ಮಾಲೀಕರು ಪಟ್ಟಣ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಆಧರಿಸಿ ಪೊಲೀಸರು ಬಸ್ ಪರಿಶೀಲನೆ ನಡೆಸಿದ್ದು, ಬೆಂಗಳೂರಿನಲ್ಲಿ ಬಸ್ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net