ನಗರದಲ್ಲಿ ಕೆಲಕಾಲ ಗಾಳಿ-ಮಳೆ

28rajesh8
Published on

ಚಾಮರಾಜನಗರ: ಕೆಲಕಾಲ ಸುರಿದ ಬಿರುಗಾಳಿ ಸಹಿತ ಮಳೆಗೆ ಮರದ ಕೊಂಬೆ ಮುರಿದು ಬಿದ್ದರೇ, ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಯಿತು.

ನಗರದಲ್ಲಿ ಸೋಮವಾರ ಸಂಜೆ ವೇಳೆಯಲ್ಲಿ ಕೆಲಕಾಲ ಬಿರಾಗಾಳಿ ಸಹಿತ ಮಳೆ ಸುರಿಯಿತು. ಪರಿಣಾಮವಾಗಿ ಜಿಲ್ಲಾಧಿಕಾರಿ ಭವನದ ರಸ್ತೆ ಹಾಗೂ ಇನ್ನಿತರೆ ರಸ್ತೆಗಳಲ್ಲಿ ಮಳೆನೀರು ನಿಂತು ಸಮಸ್ಯೆ ಉಂಟಾಯಿತು. ಹಲವು ರಸ್ತೆಗಳಲ್ಲಿ ಚರಂಡಿ ನೀರು ರಸ್ತೆಗಳಿಗೆ ಹರಿದು ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸಿದರು.

ದಿಡೀರ್ ಸುರಿದ ಗಾಳಿ-ಮಳೆಗೆ ಹಲವು ಕಡೆಗಳಲ್ಲಿ ಒಣಗಿದ್ದು ಮರದ ರೆಂಬೆ-ಕೊಂಬೆಗಳು ಮುರಿದು ಬಿದ್ದವು. ನಗರದ ತಾಲೂಕು ಕಚೇರಿಯ ಹಿಂಭಾಗದಲ್ಲಿರುವ ತಾಲೂಕು ಕೃಷಿ ಕಚೇರಿಯ ಆವರಣದಲ್ಲಿ ಮರದ ದೊಡ್ಡ ಕೊಂಬೆಯೊಂದು ಮುರಿದು ಬಿದ್ದಿತ್ತು. ಮರದ ಒಣಗಿದ ರೆಂಬೆಯೊಂದು ಕಿಟಕಿಯ ಗಾಜಿಗೆ ತಗುಲಿ ಗಾಜು ಹೊಡೆದು ಚೂರಾಯಿತು. ಸಂತೇಮರಹಳ್ಳಿ ವೃತ್ತದಿಂದ ಎಲ್‌ಐಸಿ ವೃತ್ತಕ್ಕೆ ಹೋಗುವ ಮಾರ್ಗ ಮಧ್ಯೆ ನಡೆಯುತ್ತಿರುವ ಸೇತುವೆ ಕಾಮಗಾರಿಗೆ ದಿಡೀರ್ ಮಳೆಯಿಂದಾಗಿ ಅಡಚಣೆ ಉಂಟಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net