ನಗರದಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್ ಮಳಿಗೆ: ಬಾಲಿವುಡ್‌ನ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಉದ್ಘಾಟನೆ

mysore
Published on

ಮೈಸೂರು: ಭಾರತದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಕಲ್ಯಾಣ್ ಜ್ಯುವೆಲ್ಲರ್ಸ್ ಸೋಮವಾರ ನಗರದಲ್ಲಿ ತನ್ನ ಹೊಸ ಶೋರೂಮ್ ಪ್ರಾರಂಭಿಸಿದ್ದು, ಈ ಸೊಗಸಾದ ವಿನ್ಯಾಸದ ಚಿನ್ನದಂಗಡಿಯನ್ನು ಬಾಲಿವುಡ್‌ನ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಉದ್ಘಾಟಿಸಿದರು.

ಈ ಶೋರೂಮ್‌ನಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್ ಬ್ರ್ಯಾಂಡ್‌ನ ವಿವಿಧ ಸಂಗ್ರಹಗಳ ವ್ಯಾಪಕ ಶ್ರೇಣಿಯ ಡಿಸೈನ್‌ಗಳು ಲಭ್ಯವಿವೆ. ಉದ್ಘಾಟನಾ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಬಾಲಿವುಡ್ ತಾರೆಯನ್ನು ನೋಡಲು, ಅಭಿಮಾನಿಗಳು ಮತ್ತು ಗ್ರಾಹಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಗ್ರಾಹಕರಿಂದ ದೊರೆತ ಈ ಅಭೂತಪೂರ್ವ ಆತ್ಮೀಯ ಸ್ವಾಗತದಿಂದ ಕಾರ್ಯಕ್ರಮ ಮತ್ತಷ್ಟು ಸಂಭ್ರಮದಿಂದ ಜರುಗಿತು.

ಮಳಿಗೆ ಉದ್ಘಾಟಿಸಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಕುಂದ್ರಾ, ಕಲ್ಯಾಣ್ ಜ್ಯುವೆಲ್ಲರ್ಸ್‌ನ ಹೊಸ ಶೋರೂಮ್ ಉದ್ಘಾಟನೆಗಾಗಿ ಇಲ್ಲಿಗೆ ಬಂದಿರುವುದು ಸಂತೋಷ ತಂದಿದೆ. ವಿಶ್ವಾಸ, ಪಾರದರ್ಶಕತೆ ಮತ್ತು ಗ್ರಾಹಕ ಕೇಂದ್ರಿತ ಮೌಲ್ಯಗಳ ಕುರಿತು ಗಾಢ ನಂಬಿಕೆ ಹೊಂದಿರುವ ಕಲ್ಯಾಣ್ ಜ್ಯುವೆಲ್ಲರ್ಸ್ ಅನ್ನು ಪ್ರತಿನಿಧಿಸುವುದು ಸೌಭಾಗ್ಯ.

ಗ್ರಾಹಕರು ಈ ಕಲ್ಯಾಣ್ ಜ್ಯುವೆಲ್ಲರ್ಸ್ ಶೋರೂಮ್ ಅನ್ನು ಖುಷಿಯಿಂದ ಸ್ವಾಗತಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಗ್ರಾಹಕರು ಇಲ್ಲಿನ ಅತ್ಯುತ್ತಮ ಸೇವೆಯನ್ನು ಮೆಚ್ಚುವುದರ ಜತೆಗೆ ನಾವು ನೀಡುವ ವೈವಿಧ್ಯಮಯ ಆಭರಣ ಸಂಗ್ರಹ ಆನಂದಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು.

ಹೊಸ ಶೋರೂಮ್ ಕುರಿತು ಮಾತನಾಡಿದ ಕಲ್ಯಾಣ್ ಜ್ಯುವೆಲ್ಲರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್ ಅವರು, ಗ್ರಾಹಕರ ವಿಶಿಷ್ಟ ಅಗತ್ಯ ಪೂರೈಸುವ ಸಮಗ್ರ ವ್ಯವಸ್ಥೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಈ ಶೋರೂಮ್ ಗ್ರಾಹಕರ ಶಾಪಿಂಗ್ ಅನುಭವ ಉತ್ತಮಗೊಳಿಸುತ್ತದೆ ಎಂಬ ನಂಬಿಕೆ ಹೊಂದಿದ್ದೇವೆ.

ನಾವು ನಿರಂತರವಾಗಿ ವಿಕಸನಗೊಳ್ಳಲು ಬದ್ಧ. ವಿಶ್ವ ದರ್ಜೆಯ ವಾತಾವರಣವನ್ನು ಗ್ರಾಹಕರಿಗೆ ಒದಗಿಸುತ್ತೇವೆ. ಬ್ರ್ಯಾಂಡ್ ನ ಮೂಲ ಮೌಲ್ಯಗಳಾದ ವಿಶ್ವಾಸ ಮತ್ತು ಪಾರದರ್ಶಕತೆ ಎತ್ತಿ ಹಿಡಿಯುತ್ತೇವೆ. ಗುಣಮಟ್ಟ ಮತ್ತು ಅತ್ಯುತ್ತಮ ಸೇವೆಗೆ ಒತ್ತು ನೀಡುವುದರ ಜತೆಗೆ ಅದ್ಭುತ, ವಿಶಿಷ್ಟ ಆಭರಣ ಡಿಸೈನ್‌ಗಳ ವ್ಯಾಪಕ ಶ್ರೇಣಿ ನೀಡುವುದನ್ನು ಮುಂದುವರಿಸುತ್ತೇವೆ ಎಂದರು.

ಆಕರ್ಷಕ ಕೊಡುಗೆ: ಗ್ರಾಹಕರು ಆಭರಣ ಖರೀದಿಗಳಲ್ಲಿ ಗಣನೀಯ ಉಳಿತಾಯ ಪಡೆಯಬಹುದು. ಉದ್ಘಾಟನಾ ಕೊಡುಗೆಯ ಭಾಗವಾಗಿ, ಗ್ರಾಹಕರು ಮೇಕಿಂಗ್ ಚಾರ್ಜ್ ಮೇಲೆ ಫ್ಲ್ಯಾಟ್ ಶೇ.50ರಷ್ಟು ರಿಯಾಯಿತಿ ಪಡೆಯಬಹುದು. ಈ ಕೊಡುಗೆಯು ಕಲಾತ್ಮಕತೆ ಮತ್ತು ಅಪೂರ್ವ ಡಿಸೈನ್ ಹೊಂದಿರುವ ಸೊಗಸಾದ ಆಭರಣ ಮೌಲ್ಯದಲ್ಲಿ ಪಡೆಯಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ.

ಸ್ಪೆಷಲ್ ಗೋಲ್ಡ್ ಬೋರ್ಡ್ ರೇಟ್ - ಮಾರುಕಟ್ಟೆಯಲ್ಲೇ ಅತ್ಯಂತ ದರ ಹೊಂದಿದೆ ಮತ್ತು ಕಂಪನಿಯ ಎಲ್ಲ ಶೋರೂಮ್‌ಗಳಲ್ಲಿ ಒಂದೇ ಬೆಲೆ ಅನ್ವಯವಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಹಕರು 4- ಲೆವೆಲ್ ಅಶ್ಯೂರೆನ್ಸ್ ಸರ್ಟಿಫಿಕೇಟ್ ಪಡೆಯುತ್ತಾರೆ. ಈ ಸರ್ಟಿಫಿಕೇಟ್ ಶುದ್ಧತೆ, ಆಭರಣಗಳ ಉಚಿತ ಜೀವಮಾನದ ನಿರ್ವಹಣೆ, ವಿವರವಾದ ಉತ್ಪನ್ನ ಮಾಹಿತಿ ಮತ್ತು ಪಾರದರ್ಶಕ ವಿನಿಮಯ ಮತ್ತು ಮರು ಖರೀದಿ ವಿಚಾರದಲ್ಲಿ ಗ್ಯಾರಂಟಿ ಒದಗಿಸುತ್ತದೆ.

ಆಭರಣ ಸಂಗ್ರಹಗಳು ಮತ್ತು ಕೊಡುಗೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಭೇಟಿ ಠಿಠಿ://ಡಿಡಿಡಿ.ಚ್ಝಚ್ಞ್ಜಛಿಡಿಛ್ಝ್ಝಿಛ್ಟಿ.್ಞಛಿಠಿ/ ಸಂಪರ್ಕಿಸಬಹುದು ಎಂದು ರಮೇಶ್ ಕಲ್ಯಾಣರಾಮನ್ ತಿಳಿಸಿದರು.

*16

ನಗರದಲ್ಲಿ ಸೋಮವಾರ ಕಲ್ಯಾಣ್ ಜ್ಯುವೆಲ್ಲರ್ಸ್‌ನ ಹೊಸ ಶೋರೂಮ್ ಅನ್ನು ಬಾಲಿವುಡ್‌ನ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಉದ್ಘಾಟಿಸಿದರು. ರಮೇಶ್ ಕಲ್ಯಾಣರಾಮನ್ ಇನ್ನಿತರರಿದ್ದರು.

*17

ಕಲ್ಯಾಣ್ ಜ್ಯುವೆಲ್ಲರ್ಸ್‌ನ ಹೊಸ ಶೋರೂಮ್‌ನಲ್ಲಿ ಗಮನ ಸೆಳೆದ ಬಾಲಿವುಡ್‌ನ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net