

ಬಳ್ಳಾರಿ : ನಗರದ ಹಲವು ಉದ್ಯಾನವನಗಳು ಸೂಕ್ತ ನಿರ್ವಹಣೆಯಿಲ್ಲದೆ ಕಸದ ತ್ಯಾಜಗಳಿಂದ ಕೂಡಿದರೆ. ಇಲ್ಲೊಂದು ಔಷಧ ಉದ್ಯಾನ ಆರಂಭಿಸಲಾಗಿದ್ದು, 48 ರೀತಿಯ ಔಷಧ ಸಸ್ಯಗಳನ್ನು ಇಲ್ಲಿ ಕಾಣಬಹುದಾಗಿದೆ.
ಇಲ್ಲಿನ ಕೋಟೆ ಪ್ರದೇಶದ ಪ್ರಧಾನ ಅಂಚೆ ಕಚೇರಿಯ ಸಮೀಪದಲ್ಲಿ 2017 ರಲ್ಲಿ ಪಾಲಿಕೆಯಿಂದ ಹತ್ತು ಲಕ್ಷ ರೂ. ದಲ್ಲಿ ಈ ಉದ್ಯಾನವನ ನಿರ್ಮಿಸಲಾಗಿತ್ತು. ಆಗಿನ ಪಾಲಿಕೆ ಕಮಿಷನರ್ ಪ್ರೀತಿ ಗೆಹ್ಲೋಟ್ ನಗರದಲ್ಲಿನ ಪಾರ್ಕ್‌ಗಳ ನಿರ್ವಹಣೆ ವೇಳೆ ಯೋಜನೆ ರೂಪಿಸಲಾಗಿತ್ತು. ಆದರೆ, ಅವರು ವರ್ಗಾವಣೆಗೊಂಡ ಬಳಿಕ ಯೋಜನೆ ನೆನಗುದಿಗೆ ಬಿದ್ದಿತು. ಈಗಿನ ಪಾಲಿಕೆ ಕಮಿಷನರ್ ಖಲೀಲ್ ಸಾಬ್ ಮುತಾವರ್ಜಿಯಿಂದ ಗುತ್ತಿಗೆ ಮೂಲಕ ಔಷಧ ವನ ಆರಂಭಿಸಲು ಸೂಚಿಸಲಾಗಿತ್ತು. ಕಳೆದ ಆರು ತಿಂಗಳ ಹಿಂದಯೇ ಎ ಕ್ಲಾಸ್ ಗುತ್ತಿಗೆದಾರ ರವಿ ಮೂಲಕ ನೊಪಸ್ನ ಸಂಸ್ಥೆ ಗುತ್ತಿಗೆ ಪಡೆದು ಗಿಡ ಮೂಲಿಕೆಗಳನ್ನು ಬೆಳೆಯಲಾಗಿದೆ. ಇದರಲ್ಲಿ ಬೆಳೆದಿರುವ ಪ್ರತಿಯೊಂದು ಗಿಡ ಮೂಲಿಕೆಗಳು ಮಾನವನ ವಿವಿಧ ರೋಗಕ್ಕೆ ಗುಣಪಡಿಸುವ ಮೂಲಿಕೆಗಳಾಗಿವೆ. ಅರಳಿ (ಪುರುಷತ್ವವೃದ್ಧಿ), ಅತ್ತಿ (ಮದುಮೇಹ), ಮುತ್ತುಗ (ಕೃಮಿರೋಗ), ಉತ್ತರಾಣೆ (ಮೂಲವೃದ್ಧಿ), ಬಿಳಿಎಕ್ಕೆ (ಚರ್ಮರೋಗ, ಕಗ್ಗಲಿ ಚರ್ಮರೋಗ), ದರ್ಬೆ (ಮೂತ್ರರೋಗ ನಿವಾರಕ), ತೆರೆದು (ಬಾವು ಕಡಿಮೆ ಮಾಡುವುದು), ಗರಿಕೆ (ಗಭಸ್ಥಪನೆ), ಸದಾ ಮಲ್ಲಿಗೆ (ಕ್ಯಾನ್ಸರ್), ತುಳಸಿ (ಕೆಮ್ಮು), ದಾಸವಾಳ ಕೆಂಪು (ಕೇಶ್ಯ), ದಾಸವಾಳ ಬಿಳಿ (ಬುದ್ಧಿ ವೃದ್ಧಿ), ಇನ್ಸುಲಿನ್ (ಚಂಗಲ್ ಕೋಷ, ಮದುಮೇಹ), ರಾಮ ಫಲ (ಜ್ವರ, ಅತಿಸಾರ, ಕ್ರಿಮಿ), ಕಾಮ ಕಸ್ತೂರಿ (ಕ್ರಿಮಿ), ಮಿಂಟಿ ತುಳಸಿ (ಶ್ವಾಸರೋಗ), ರೋಸ್ ಮರಿ(ಕೂದಲಿನ ದೃಢತೆ), ದವಾನ (ಚರ್ಮರೋಗ), ಮಜಪತ್ರೆ(ಅಜೀರ್ಣ), ಬಿಲ್ವ (ಅತಿಸಾರ ಭೇದಿ), ಸಿಹನ್ಸ್ (ಬಲಕಾರಕ), ಸಂಪಿಗೆ (ಮೂತ್ರರೋಗ), ರಕ್ತಚಂದನ (ಪಿತ್ತ ರೋಗ), ಬೆಟ್ಟದ ನಲ್ಲಿಕಾಯಿ (ರಸಾಯನ), ಕಕ್ಕೆ (ಮಲಬದ್ಧತೆ), ನಿಂಬೆ (ರುಚಿವರ್ಧಕ), ತರ್ಮಿದ (ಅತಿಸಾರ ಮಲಬದ್ಧತೆ), ಕರಿಬೇವು (ಮಧುಮೇಹ), ನುಗ್ಗೆ (ಕಣ್ಣಿನ ರೋಗ, ನಪುಂಶಕತೆ), ನಿಲ್ಲಿ (ರಕ್ತವರ್ಧಕರ), ಲೋಳೆ ಸರ (ಯಕೃತ ರೋಗಗಳು), ಅಜ್ವೈನ್ (ಹೊಟ್ಟೆನೋವು), ಲೆಮನ್ ಗ್ರಾಸ್ (ಊರಿಯೂತ ಕಡಿಮೆ ಮಾಡುತ್ತದೆ), ಸಡಪ (ಕ್ಯಾನ್ಸರ್), ದವಾನ (ವಾಂತಿ), ಅಸ್ಪರ ಗ್ರಾಸ್(ಬಲವರ್ಧನೆ ), ತುಂಬೆಗಿದೆ (ವಿಷಮಜ್ವರ, ಕಾಮಾಲೆ), ಕಣಗಲೆ (ಹೃದಯರೋಗ ), ಅಶೋಕ (ಮುಟ್ಟಿನ ದೋಷ), ಅಡಿಕೆ ( ಕಫರೋಗ), ನೆಲ್ಲಿ (ರಸಾಯನ), ಪಾರಿಜಾತ (ಯಕೃತ ರೋಗಗಳು) ಮುತ್ತುಗ (ಕೃಮಿರೋಗ, ಮೂಲವಾದಿ), ಗರಿಕೆ (ಗರ್ಭನಿಲ್ಲುವ ಸಲುವಾಗಿ), ಹಲಸು (ಬಲ್ಯ), ಚಂದನ (ಪಿತ್ತ ರೋಗ), ಅಲ್ಲ (ಮಧುಮೇಹ), ಅರಳಿ(ಹೃದಯರೋಗ), ನೆರಲೆ (ಮೂಳೆ ಮುರಿತ, ಸಂಧಿನೋವು) ಬೆಳೆದಿರುವ ಮೂಲಿಕೆಗಳು. ಸದ್ಯ ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ನೊಪಸ್ನ ಸಂಸ್ಥೆಯು ಜೂನ್ ಒಂದ ರಿಂದ ಪಾಲಿಕೆಗೆ ವಹಿಸಲಿದೆ. ಒಟ್ಟಾರೆ ಈ ಎಲ್ಲ ಗಿಡಮೂಲಿಕೆಗಳನ್ನು ಆರು ತಿಂಗಳಲ್ಲಿಯೇ ಬೆಳೆಸಿದ್ದು, 9.8 ಲಕ್ಷ ರೂ. ವ್ಯಯಿಸಲಾಗಿದೆ. ಇಲ್ಲಿಯವರೆಗೆ ವ್ಯವಸ್ಥಿತವಾಗಿ ಕಾಪಾಡಿಕೊಳ್ಳಲಾಗಿದೆ. ಈಗ ಔಷಧ ವನವನ್ನು ಪಾಲಿಕೆ ಹೇಗೆ ನಿರ್ವಹಣೆ ಮಾಡಲಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕೋಟ್….. ಕಳೆದ 35 ವರ್ಷಗಳಿಂದ ನೊಪಾಸ್ನ ಸಂಸ್ಥೆಯು ಶಾಲಾ ಕಾಲೇಜುಗಳಲ್ಲಿ ಪರಿಸರದ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ. ಪರಿಸರ ಮತ್ತು ಆರೋಗ್ಯದ ಕಾಳಜಿ ಬಗ್ಗೆ ಜನರಿಗೆ ಬರಲಿ ಎಂಬುದೇ ಸಂಸ್ಥೆಯ ಉದ್ದೇಶ.