ನಗರದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ

IMG-20241223-WA0066
Published on

ಚಾಮರಾಜನಗರ: ಮೈಸೂರು ಜೆಎಸ್ಎಸ್ ಆಸ್ಪತ್ರೆ, ಡಾ. ಬಾಬು ಸೋಶಿಯಲ್ ವೆಲ್ ಫೇರ್ ಅಂಡ್  ಚಾರಿಟಬಲ್ ಟ್ರಸ್ಟ್ ಮತ್ತು  ಮೈಸೂರ್ ಇಎನ್ ಟಿ ರಿಸರ್ಚ್ ಅಂಡ್ ಚಾರಿಟೇಬಲ್ ಟ್ರಸ್ಟ್

ಸಹಯೋಗದಲ್ಲಿ  ಡಿ.27 ರಂದು ಶುಕ್ರವಾರ ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಡಾ.ಬಾಬು ಸೋಷಿಯಲ್

ವೆಲ್‌ಫೇ‌ರ್ ಅಂಡ್‌ ಚಾರಿಟಬಲ್ ಟ್ರಸ್ಟ್  ಅಧ್ಯಕ್ಷರು, ಕಿವಿ, ಮೂಗು ಮತ್ತು ಗಂಟಲು ತಜ್ಞ ಡಾ.ಎ.ಆರ್.ಬಾಬು ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಅಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ. ಕಿವುಡುತನ, ಗಂಟಲು, ಕಿವಿ, ಮೂಗು ಕ್ಯಾನ್ಸರ್, ಅಲರ್ಜಿ, ಅಸ್ತಮಾ, ಹೃದಯ, ಕ್ಯಾನ್ಸರ್, ಮೂಳೆರೋಗ ಸೇರಿದಂತೆ ಇತರೆ ತಪಾಸಣೆ ನಡೆಸಲಾಗುವುದು. ಅಗತ್ಯವಿದ್ದರೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗುವುದು ಎಂದರು.

ಡಾ. ಎ.ಆರ್ ಬಾಬು ಸೋಶಿಯಲ್ ಟ್ರಸ್ಟ್ ಮೂಲಕ ಜಿಲ್ಲೆ ಹಾಗೂ ತಾಲೂಕಿನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ಮಾಡುತ್ತಾ ಬರಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸುಮಾರು ಚಾಮರಾಜನಗರ ತಾಲೂಕಿನ ಭಾಗಗಳಲ್ಲಿ ಆಯ್ದ ಸರ್ಕಾರಿ ಶಾಲೆಗಳ ಸುಮಾರು 7 ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ, ಲೇಖನ ಸಾಮಾಗ್ರಿಗಳ ವಿತರಣೆ, ಅಗತ್ಯಯಿರುವ ಶಾಲೆಗಳಿಗೆ ಟ್ರಸ್ಟ್ ಮೂಲಕ ಕ್ರೀಡಾ ಸಾಮಾಗ್ರಿಗಳನ್ನು ಕೂಡ ವಿತರಿಸಲಾಗಿದೆ ಎಂದರು.

ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಕಣ್ಣಿನ ತಪಾಸಣೆ ತಿಬಿರ ಮಾಡಿ ಸುಮಾರು 3 ಸಾವಿರಕ್ಕಿಂತ ಹೆಚ್ಚು ಜನರಿಗೆ ತಪಾಸಣೆ ನಡೆಸಿ, 300ಕ್ಕೂ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.ಹೃದಯ ಸಂಬಂಧಿತ ಕಾಯಿಲೆಗೆ ತಪಾಸಣಾ ಶಿಬಿರ ನಡೆಸಿದ್ದು 1800 ಜನರು ಇದರ ಪ್ರಯೋಜನ ಪಡೆದಿದ್ದಾರೆ. ಕೀಲು ಮತ್ತು ಮೂಳೆ ಶಿಬಿರದಲ್ಲಿ 600 ಜನರು ಪ್ರಯೋಜನ ಪಡೆದಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಇಎನ್‌ಟಿ ಶಿಬಿರಗಳನ್ನು ನಡೆಸಲಾಗಿದೆ. ಅಂದು ನಡೆಯುವ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಶಿಬಿರದಲ್ಲಿ  ಕಿವುಡುತನ ತಪಾಸಣೆ  ಮಾಡಿ  ಕಿವುಡುತನ  ಇರುವವರಿಗೆ  ಸಲಹೆಗಳನ್ನು ನೀಡಿ ಅರ್ಹ ಬಿಪಿಎಲ್  ಬಳಕೆದಾರರಿಗೆ ಉಚಿತವಾಗಿ  ವಾಕ್ ಶ್ರವಣ ಯಂತ್ರವನ್ನು  ಉಚಿತವಾಗಿ ನೀಡಲಾಗುವುದು, ಮತ್ತು  ಶ್ರವಣದೋಷದ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟಿಗೆ ಆಯ್ಕೆ ಮಾಡಲಾಗುವುದು  ಪ್ರತಿ  ಇಂಪ್ಲಾಂಟಿಗೆ ಸುಮಾರು 6 ರಿಂದ 8 ಲಕ್ಷಗಳು ಆಗುತ್ತೆ  ಇದನ್ನು ಉಚಿತವಾಗಿ ಯೋಜನೆಗಳಲ್ಲಿ ಮಾಡಿಕೊಡಲಾಗುವುದು. ಕಣ್ಣಿನ  ತಪಾಸಣೆ ನಡೆಸಿ ಅರ್ಹರಿಗೆ ಶಸ್ತ್ರ ಚಿಕಿತ್ಸೆ ಆಸ್ಪತ್ರೆಯಲ್ಲಿ ಮಾಡಿಸಲಾಗುವುದು,  ಅಲರ್ಜಿ ಮತ್ತು ಅಸ್ತಮಾ ರೋಗ ಇರುವವರಿಗೆ  ಪರೀಕ್ಷೆಯನ್ನು ಮಾಡಿ, ಸೂಕ್ತ ಸಲಹೆಯನ್ನು ನೀಡಲಾಗುವುದು,  ಕಿವಿ ಮೂಗು ಮತ್ತು ಗಂಟಲು ಕ್ಯಾನ್ಸರ್ ಇರುವವರಿಗೆ  ಆಸ್ಪತ್ರೆಯಲ್ಲಿ ಉಚಿತವಾಗಿ  ಯಶಸ್ವಿನಿ ಮತ್ತು ಆಯುಷ್ಮಾನ್ ಭಾರತದ  ಸರ್ಕಾರದ ಯೋಜನೆ ಗಳ ಅಡಿಯಲ್ಲಿ ಉಚಿತವಾಗಿ  ಚಿಕಿತ್ಸೆಯನ್ನು ನೀಡಲಾಗುವುದು ಎಂದರು.

ಈ ಶಿಬಿರದಲ್ಲಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯ ನುರಿತ ವೈದ್ಯರುಗಳು, ಚಾಮರಾಜನಗರ ಜೆಎಸ್ಎಸ್ ಆಸ್ಪತ್ರೆಯ ಸಿಬ್ಬಂದಿಗಳು, ನಡೆಸಿಕೊಡಲಿದ್ದಾರೆ ಎಂದರು. ಈ ವೇಳೆ ಜೆಎಸ್‌ಎಸ್‌ ಆಸ್ಪತ್ರೆ ಆಡಳಿತಾಧಿಕಾರಿ ವಿಕಾಸ್‌ ಹಾಜರಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net