ನಗರದಲ್ಲಿ 26ರಂದು ಪುಪ್ಪು ನಮನ ಕಾರ್ಯಕ್ರಮ

ನಗರದಲ್ಲಿ 26ರಂದು ಪುಪ್ಪು ನಮನ ಕಾರ್ಯಕ್ರಮ
Published on

ಹಾಸನ: ಮೈಸೂರು ಸುತ್ತೂರು ಮಠದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಜಿಯವರ 108ನೇ ಜಯಂತಿ ಪ್ರಯುಕ್ತ ಸೆ.26ರಂದು ಮಂಗಳವಾರ ಪುಷ್ಪ ನಮನ ಮತ್ತು ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಮಹಾವಧಿಕೆಯ ಜಿಲ್ಲಾಧ್ಯಕ್ಷ ವಸಂತ್‌ಕುಮಾರ್ ತಿಳಿಸಿದರು.

ಮೊಟ್ಟಮೊದಲ ಬಾರಿಗೆ ಸುತ್ತೂರು ಕ್ಷೇತ್ರದ ರಾಜಗೋಪುರ ಹೋಲುವ ವಿಶೇಷ ಮಂಟಪವನ್ನು ನಗರದ ಭಗವನ್ ಮಹಾವೀರ ವೃತದ ಸಮೀಪ ಬೆಳಗ್ಗೆ 8:30 ರಿಂದ ಮಧ್ಯಾಹ್ನ 3 ಗಂಟೆವರೆಗೆ ಇಟ್ಟು ಪುಷ್ಪ ನಮನ ಸಲ್ಲಿಸಲಾಗುವುದು. ನಂತರ ಬಂದಂತಹ ಎಲ್ಲ ಭಕ್ತಾದಿಗಳಿಗೆ ಅನ್ನದಾಸೋಹವನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರು ಕೇವಲ ಮಠಾಧೀಶರಾಗದೆ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಸಾಕಷ್ಟು ಸೇವೆಯನ್ನು ಸಲ್ಲಿಸುವ ಮೂಲಕ ದಾರಿ ದೀಪವಾಗಿದ್ದರು, ಅವರ ಕಾಯಕಗಳು ಎಲ್ಲರಿಗೂ ಮಾದರಿಯಾಗಿವೆ. ಈ ಹಿನ್ನಲೆಯಲ್ಲಿ ಅವರ ಜಯಂತಿ ಪ್ರಯುಕ್ತ ಈ ರೀತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಈಗಾಗಲೇ ಜಿಲ್ಲೆಯನ್ನು ಪ್ರವೇಶಿಸಿರುವ ಗೋಪುರವು ತಾಲೂಕುಗಳಲ್ಲಿ ಸಂಚರಿಸುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯಿತ ಮಹಾ ವೇದಿಕೆಯ ಪದಾಧಿಕಾರಿಗಳಾದ ಪ್ರಕಾಶ್, ಧರ್ಮ, ದೇವರಾಜ ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net