ನಗರದ ಸೌಂದರ್ಯೀಕರಣಕ್ಕೆ ಶ್ರಮಿಸಿ -ಪೌರಕಾರ್ಮಿಕರಿಗೆ ಶಾಸಕ ಎಸ್ಸೆಸ್ ಸಲಹೆ

DVG-BHOMI-POOJE-JULY-16.jpg
Published on

ದಾವಣಗೆರೆ: ದಾವಣಗೆರೆಯನ್ನು ಸುಂದರ ನಗರವಾಗಿಸಲು ಪೌರ ಕಾರ್ಮಿಕರು ಸಮರ್ಪಕ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದರು.

ನಗರದ 17ನೇ ವಾರ್ಡ್‌ನ ಸೂಪರ್ ಮಾರ್ಕೆಟ್ ಬಳಿ ಭಾನುವಾರ ಪೌರಕಾರ್ಮಿಕರಿಗೆ ನಿರ್ಮಿಸಲಾಗುತ್ತಿರುವ ಅತ್ಯಾಧುನಿಕ ವಿಶ್ರಾಂತಿ ಗೃಹದ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಪೌರ ಕಾರ್ಮಿಕರ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆ ಅತ್ಯಾಧುನಿಕ ವಿಶ್ರಾಂತಿ ಗೃಹ ನಿರ್ಮಿಸುತ್ತಿದೆ. ಇದರಿಂದಾಗಿ ಪ್ರತಿದಿನ ಗಂಟೆಗಟ್ಟಲೇ ಕೆಲಸಮಾಡಿ ಸುಸ್ತಾಗಿ ಬರುವ ಕಾರ್ಮಿಕರು ವಿಶ್ರಮಿಸಲು ಅನುಕೂಲವಾಗುತ್ತದೆ ಎಂದರು.

ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, 2021-22ನೇ ಸಾಲಿನ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಅತ್ಯಾಧುನಿಕ ವಿಶ್ರಾಂತಿ ಗೃಹ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪಾಲಿಕೆಯ ಮೇಯರ್ ವಿನಾಯಕ್ ಪೈಲ್ವಾನ್, ಕಾರ್ಯಪಾಲಕ ಇಂಜಿನಿಯರ್ ಎಂ.ಎನ್. ಹರ್ಷಿತಾ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿನಾಯಕ್ ಎಂ. ನಾಯಕ್, ಮಾರುತಿ, ಗುತ್ತಿಗೆದಾರರಾದ ತಿಲಕ್ ರತ್ನ, ಉಮೇಶ್, ಶೀತಲ್ ನಾಯ್ಕ, ಕಾರ್ತಿಕ್ ಆಲೂರು, ಸ್ವರೂಪ್ ಮತ್ತಿ, ಅಭಿಲಾಷ್ ಇದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net