ನಗರದ ವಿವಿಧೆಡೆ ರಾಜ್ಯೋತ್ಸವ ಸಂಭ್ರಮ

Rajyothsava
Published on

ಚಿತ್ರದುರ್ಗ: ಕೋಟೆನಗರಿ ಸೇರಿ ಜಿಲ್ಲೆಯ ಹಲವು ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು, ಸರ್ಕಾರಿ-ಖಾಸಗಿ ಒಳಗೊಂಡು ವಿವಿಧ ಪಕ್ಷಗಳ ಕಚೇರಿಗಳಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿಯ ಆರಾಧನೆ, ಕನ್ನಡ ನಾಡು-ನುಡಿ, ನೆಲ-ಜಲ, ಭಾಷೆಗಾಗಿ ದುಡಿದ ಮಹನೀಯರನ್ನು ಸ್ಮರಿಸುವ ಮೂಲಕ ಬುಧವಾರ ವಿಶೇಷವಾಗಿ ಆಚರಿಸಲಾಯಿತು.

ಜಿಲ್ಲಾಸ್ಪತ್ರೆಯ ಕೃಷ್ಣ ಡೈನಾಸ್ಟಿಕ ಲಿಮಿಟೆಡ್ ಎಂಆರ್‌ಐ ವಿಭಾಗದಿಂದ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ವಿಭಾಗದ ಮುಖ್ಯಸ್ಥ ಮಂಜುನಾಥ್ ರಾಥೋಡ್, ಸಿಬ್ಬಂದಿಗಳಾದ ರಾಘವೇಂದ್ರ, ಪದ್ಮಾ, ದೀಪಾ, ಮನೋಜ್, ಲಿಂಗರಾಜು, ಪ್ರಸನ್ನ, ಸುಮನ್, ಮೋಹನ್, ಸತೀಶ್, ಉಮೇಶ್, ಸಾಯಿಲ್, ಸ್ವಪ್ನಿಲ್, ಆಗಸ್ಟಿನ್, ಎಂ.ಕೋಲಾರಪ್ಪ ಇತರರಿದ್ದರು.

ಎಸ್ಸೆನ್ ಸ್ಮಾರಕ: ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ಅವರ ಸ್ಮಾರಕದ ಅವರಣದಲ್ಲಿ ರಾಜ್ಯೋತ್ಸವ ಅಂಗವಾಗಿ ಎಸ್ಸೆನ್ ಟ್ರಸ್ಟ್ ಕಾರ್ಯದರ್ಶಿ ಎಚ್.ಹನುಮಂತಪ್ಪ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಮಾಜಿ ಸದಸ್ಯ ಪ್ರಕಾಶ್, ಕಾಂಗ್ರೆಸ್ ಮುಖಂಡ ಅನಿಲ್ಕುಮಾರ್, ನಂದೀಶ್, ಶಂಕರಪ್ಪ, ಗುರು ಬಸವರಾಜ್ ವಿಭ, ಸಿರಿಗೌರಿ , ಸಚಿನ್, ಕೆಇಬಿ ಷಣ್ಮುಖಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net