ನಗರದ ಗಣೇಶ ಟೆಂಟ್‌ಗಳಿಗೆ ಶಾಸಕ ಭೇಟಿ

09 YERRISWAMY 01
Published on

ಬಳ್ಳಾರಿ : ನಗರದ ವಿವಿಧ ಪ್ರದೇಶಗಳಲ್ಲಿ ಗಣೇಶ ಚತುರ್ಥಿ ಹಿನ್ನೆಲೆ ವಿನಾಯಕ ಮಂಡಳಿಗಳು ಪ್ರತಿಷ್ಠಾಪಿಸಿರುವ ಗಣೇಶ ಟೆಂಟ್‌ಗಳಿಗೆ ನಗರ ಶಾಸಕ ನಾರಾಭರತರೆಡ್ಡಿ ಭೇಟಿ ನೀಡಿ ದರ್ಶನ ಪಡೆದರು.
ಇಲ್ಲಿನ ಎಂ.ಜಿ ಪೆಟ್ರೋಲ್ ಬಂಕ್, ಸೆಂಟೇನರಿ ಹಾಲ್ನ ಹಿಂದೂ ಮಹಾಗಣಪತಿ, ಸಿಂದಗಿ ಕಂಪೌಂಡ್, ಕೆ.ಸಿ. ರಸ್ತೆಯ ಕಾಟೇ ಗುಡ್ಡ, ಮಿಲ್ಲರ್‌ಪೇಟೆ, ತಾಳೂರು ರಸ್ತೆ, ಎಂಆರ್‌ವಿ, ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಸೇರಿದಂತೆ ವಿವಿಧ ಗಣೇಶ ಟೆಂಟ್‌ಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಇದೇ ವೇಳೆ ಅನೇಕ ಮಂಡಳಿಗಳು ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ಗಣೇಶ ವೀಕ್ಷಿಸಲು ಆಗಮಿಸಿದ್ದ ಸಾರ್ವಜನಿಕರು ಶಾಸಕರ ಜತೆ ಸೆಲ್ಫಿ ತೆಗೆಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net