ನಗರಕ್ಕೆ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಆಗಮನ

ನಗರಕ್ಕೆ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಆಗಮನ
Published on

ಹಾಸನ: ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಹಾರನಹಳ್ಳಿ ರಾಮಸ್ವಾಮಿ ಸಭಾಂಗಣದಲ್ಲಿ ಸೋಮವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕಂಚಿ ಕಾಮಕೋಟಿ ಪೀಠದ ಪೀಠಾಧಿಪತಿ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಭಾಗಿಯಾಗಿ ಭಾರತೀಯ ಪರಂಪರೆ ಉಳಿಸಲು ಹಾಗೂ ಹಿಂದೂ ಸನಾತನ ಧರ್ಮದ ಉಳಿವಿಗಾಗಿ ಜಾಗೃತಿ ಮೂಡಿಸುವ ಕೆಲಸವನ್ನು ನಾವೆಲ್ಲಾ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಈ ವೇಳೆ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಟಿ ದ್ಯಾವೇಗೌಡ, ಮ್ಯಾನೇಜರ್ ಶಿವರಾಂ ಕೃಷ್ಣಯ್ಯ, ನಿರ್ದೇಶಕರಾದ

ಎಚ್.ಎಸ್ ಗುರುಮೂರ್ತಿ, ಚೌಡುವಳ್ಳಿ ಜಗದೀಶ್, ಪ್ರಾಂಶುಪಾಲ ಡಾ.ಎ.ಜೆ ಕೃಷ್ಣಯ್ಯ, ಕಾಲೇಜಿನ ಸಹಾಯಕ ಆಡಳಿತ ಅಧಿಕಾರಿ ಪಾರ್ವತಮ್ಮ, ಕಾಲೇಜಿನ ಕಾರ್ಪೊರೇಟ್ ಡೀನ್ ಡಾ.ಗೀತಾ ಕೀರಣ್, ಕಾಲೇಜಿನ ಅಧೀಕ್ಷಕ ಬಿ.ಅರ್.ಶಿವಕುಮಾರ್,ಪ್ರಾಧ್ಯಾಪಕರಾದ ತೇಜೋನಿದಿ, ಕಿರಣ್ ಪ್ರಜ್ವಲ್, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಉಪನ್ಯಾಸಕರು, ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net