

ಹೊಸನಗರ: ತಾಲೂಕಿನಲ್ಲಿ ಗುಡ್ಡಗಾಡು ಪ್ರದೇಶ ಹೊಂದಿರುವ ನಗರ ಹೋಬಳಿ ಹಲವು ಸಮಸ್ಯೆಯಿಂದ ನರಳುತ್ತಿದೆ. ಇಲ್ಲಿನ ಅಭಿವೃದ್ಧಿ ಸುಲಭವಲ್ಲ. ಆದ್ದರಿಂದಲೇ ನಗರ ಹೋಬಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ನಗರ ಹೋಬಳಿ ಕರಿಮನೆ ಗ್ರಾಪಂ ಪ್ರವಾಸ ವೇಳೆ ಚಕ್ರಾನಗರ ರಸ್ತೆ ಸೇರಿ 50 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಇಲ್ಲಿನ ಜನರು ಜಲ ವಿದ್ಯುತ್ ಯೋಜನೆಗಾಗಿ ಆಸ್ತಿಪಾಸ್ತಿ ದಾನ ಮಾಡಿದ್ದಾರೆ. ಇಲ್ಲಿ ಸುತ್ತಲೂ ಮುಳುಗಡೆ ಹಿನ್ನೀರು ವ್ಯಾಪಿಸಿದೆ. ಸಂತ್ರಸ್ತರ ಸಮಸ್ಯೆ ಬೆಟ್ಟದಷ್ಟಿದೆ. ಅದರ ನಡುವೆಯೂ ಇಲ್ಲಿನ ಪ್ರದೇಶದ ಅಭಿವೃದ್ಧಿ ಆಗಬೇಕು ಎಂದರು.
ಜಿಪಂ ಸದಸ್ಯ ಸುರೇಶ್ ಸ್ವಾಮಿರಾವ್, ತಾಪಂ ಸದಸ್ಯೆ ಅಶ್ವಿನಿ ರಾಜೇಶ್, ಶೋಭಾ ಮಂಜುನಾಥ್, ಮತ್ತಿಮನೆ ಸುಬ್ರಹ್ಮಣ್ಯ, ಎಪಿಎಂಸಿ ಸದಸ್ಯ ಕಣ್ಕಿ ಮಹೇಶ್, ಮ್ಯಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ರಮೇಶ ಇತರರಿದ್ದರು.