ನಗರ ಸ್ವಚ್ಛತೆಗೆ ಆದ್ಯತೆ

3006Klb05
Published on

ಕಲಬುರಗಿ: ಕರೊನಾ ಸೋಂಕಿನಿಂದ ತತ್ತರಿಸಿರುವ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಮಿಂಚಿನ ಸಂಚಾರ ನಡೆಸಿ ಆ ಮೂಲಕ ಸ್ವಚ್ಛತೆಗೆ ಗಮನ ಹರಿಸುತ್ತಿರುವ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆಯವರು ಮಂಗಳವಾರವೂ ನಗರ ಪ್ರದಕ್ಷಿಣೆ ಮುಂದುವರಿಸಿ ಜನರಿಂದ ಸಮಸ್ಯೆ ಆಲಿಸಿದರು.
ಜಗತ್ ವೃತ್ತದಿಂದ ಸಿಟಿ ಬಸ್ ಸ್ಟ್ಯಾಂಡ್ ರೋಡ್, ಖೀಲಾ ಸುತ್ತಮುತ್ತಲಿನ ಪ್ರದೇಶ ವೀಕ್ಷಿಸಿದ ಅವರು, ಅಲ್ಲಿಯ ಎಲ್ಲ ಸಮಸ್ಯೆಗಳನ್ನು ಅರಿತುಕೊಂಡರು. ಸೂಪರ್ ಮಾರ್ಕೆಟ್ ಮಾರ್ಗವಾಗಿ ಹುಮನಾಬಾದ್ ರಿಂಗ್ ರೋಡ್ ಮತ್ತು ಆಳಂದ ಚೆಕ್ ಪೋಸ್ಟ್ಗಳ ಕಡೆ ತೆರಳಿ ಮಹಾನಗರ ಪಾಲಿಕೆ ಕಾಮರ್ಿಕರಿಂದ ಅಲ್ಲಿ ಕಸ ವಿಲೇವಾರಿಯಾಗುತ್ತಿರುವುದನ್ನು ವೀಕ್ಷಿಸಿದರು.
ನಗರದ ವಾಡರ್್ 20, 21 ಮತ್ತು 22ನೇ ವಿವಿಧ ಬಡಾವಣೆಗಳಿಗೂ ಅವರು ಭೇಟಿ ನೀಡಿ, ಸಾರ್ವಜನಿಕರ ಜತೆ ಅವರ ಬಡಾವಣೆಗಳ ಸಮಸ್ಯೆ ಕುರಿತು ಚಚರ್ಿಸಿದರು. ತಮ್ಮ ಬಡಾವಣೆಗಳ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ,
ರಸ್ತೆಗಳು ಹೀಗೆ ಅನೇಕ ವಿಷಯಗಳನ್ನು ಜನತೆ ಆಯುಕ್ತರ ಗಮನಕ್ಕೆ ತಂದರು.
ನಗರವನ್ನು ಸ್ವಚ್ಛ ನಗರವನ್ನಾಗಿಸಲು ತಾವು ಪ್ರಯತ್ನಿಸುತ್ತಿದ್ದು, ತಮ್ಮ ಪ್ರಯತ್ನಕ್ಕೆ ಎಲ್ಲರೂ ಸಹಕರಿಸಬೇಕೆಂದು ಅವರು ಮನವಿ ಮಾಡಿದರು. ಇತರೆ ಅಧಿಕಾರಿಗಳು ಪಾಂಡ್ವೆಯವರ ಜತೆ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net