ನಗರ ಸೇರಿ ಜಿಲ್ಲಾದ್ಯಂತ ಮಳೆ

ran (2)
Published on

ಕಲಬುರಗಿ: ನಗರದ ಸೇರಿ ಜಿಲ್ಲೆಯ ವಿವಿಧೆಡೆ ಸೋಮವಾರ ಇಡೀ ದಿನ ಬಿಡುವಿನ ಮಧ್ಯೆ ನಿರಂತರ ಮಳೆ ಸುರಿದಿದೆ. ಕೆಲವೆಡೆ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಯಿತು. ಇಡೀ ದಿನ ತಂಪುವಾತಾವರಣವಿದ್ದು, ರಾತ್ರಿ ಮಳೆ ಸುರಿತು.
ನಗರದಲ್ಲಿ ಸೋಮವಾರ ಸುರಿದ ಮಳೆಗೆ ನಗರದ ರಸ್ತೆಗಳಲ್ಲಿ ನೀರು ಸಂಗ್ರಹವಾಗಿ, ವಿವಿಧೆಡೆ ಮನೆಗಳ ಬಳಿ ನೀರು ಹೊಕ್ಕು ಸಂಕಷ್ಟಕ್ಕೆ ಸಿಲುಕುವಂತಾಯಿತು.
ಸಾಯAಕಾಲ ಕೆಲ ಕ್ಷಣ ಸುಮಾರು ಅರ್ಧಗಂಟೆ ಸತತ ಗುಡುಗು ಸಹಿತ ಸುರಿಯಿತು. ಮಳೆಗೆ ಎಲ್ಲೆಡೆ ಸಂಚಾರ ಸ್ಥಗಿತವಾಗಿ, ಜನರು ರಸ್ತೆಯಲ್ಲಿ ಓಡಾಡದಂಥ ಸ್ಥಿತಿ ನಿರ್ಮಾಣವಾಗಿತ್ತು. ನಗರದ ಲಾಲ್‌ಗೇರಿ ಕ್ರಾಸ್ ಬಳಿ ರಸ್ತೆಯಲ್ಲಿ ಮಳೆ ನೀರು ಮೊಳಕಾಲಮಟ್ಟಿಗೆ ಸಂಗ್ರಹವಾಗಿ, ರಸ್ತೆ ಬದಿಯಲ್ಲಿನ ಅಕ್ಕಪಕ್ಕದ ಮನೆಗಳು, ಅಂಗಡಿ ಮುಂಗಟ್ಟುಗಳಲ್ಲಿ ನೀರು ಹೊಕ್ಕಿತ್ತು. ಇದರಿಂದ ಜನರು ತೀವ್ರ ಸಂಕಷ್ಟ ಎದುರಿಸಿದರು. ಅಫಜಲಪುರ, ಚಿಂಚೋಳಿ, ಕಮಲಾಪುರ, ಚಿತ್ತಾಪುರ, ಸೇಡಂ ಸೇರಿ ಭಾಗಶಃ ಇಡೀ ಜಿಲ್ಲೆಯಲ್ಲಿ ಸೋಮವಾರ ಮಳೆ ಸುರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net